ಮತದಾರರ ಕರಡು ಪಟ್ಟಿಯಲ್ಲಿ 9.63 ಲಕ್ಷ ಮಂದಿ

| Published : Oct 28 2023, 01:15 AM IST

ಸಾರಾಂಶ

ಮತದಾರರ ಕರಡು ಪಟ್ಟಿಯಲ್ಲಿ 9.63 ಲಕ್ಷ ಮಂದಿ
- ಮತಗಟ್ಟೆಯ ಸಂಖ್ಯೆ 1229ಕ್ಕೆ ಏರಿಕೆ, ಆಕ್ಷೇಪಣೆ ಸಲ್ಲಿಕೆಗೆ ಡಿ.9 ಕೊನೆ ದಿನ, ಡಿಸಿ ಮೀನಾ ನಾಗರಾಜ್‌ ಮಾಹಿತಿ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಕ್ತಾಯಗೊಂಡಿದ್ದು, ಜಿಲ್ಲೆಯ ಮತಾದರರ ಕರಡು ಪಟ್ಟಿಯನ್ನು ಈ ದಿನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದರು. ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಪ್ರಿಲ್‌ ಮಾಹೆಯಲ್ಲಿ ಜಿಲ್ಲೆಯಲ್ಲಿ 9,73,238 ಮತದಾರರು ಇದ್ದರು., ನಂತರದಲ್ಲಿ ಮನೆ ಮನೆಗಳಿಗೆ ತೆರಳಿ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಿದ್ದು, ಇದೀಗ 9,63,738 ಮತದಾರರು ಇದ್ದಾರೆ. ಅಂದರೆ ಸುಮಾರು 9,500 ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರುಗಳಲ್ಲಿ ಮೃತಪಟ್ಟವರು, ವಲಸೆ ಹೋಗಿರುವವರು ಸೇರಿದ್ದಾರೆ ಎಂದರು. ಮೃತಪಟ್ಟಿರುವ ವ್ಯಕ್ತಿಯ ಕುಟುಂಬದವರು ಮೃತರ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ಸಂಬಂಧ ಎಷ್ಟು ಅರ್ಜಿಗಳು ಬಂದಿವೆ ಎಂಬ ಮಾಹಿತಿಯನ್ನು ಕಲೆ ಹಾಕಿ ಗ್ರಾಮ ಲೆಕ್ಕಧಿಕಾರಿಗಳಿಂದ ಸಂಬಂಧಪಟ್ಟವರ ಮನೆಗಳಿಗೆ ತೆರಳಿ ಖಾತ್ರಿ ಪಡಿಸಿಕೊಂಡ ನಂತರದಲ್ಲಿ ಅಂತಹವರ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 479 ಸೇವಾ ಮತದಾರರು, 1027 ಲಿಂಗತ್ವ ಅಲ್ಪಸಂಖ್ಯಾತರು, 9649 ವಿಕಲಚೇತನ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಕಚೇರಿಗಳಲ್ಲಿ ಪ್ರಕಟಿಸ ಲಾಗುವುದು. ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಡಿಸೆಂಬರ್‌ 9 ರೊಳಗೆ ಸಂಬಂಧಿತ ನಮೂನೆಯಲ್ಲಿ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿ 2024ರ ಜನವರಿ 5 ರಂದು ಪ್ರಕಟವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ ಉಪಸ್ಥಿತರಿದ್ದರು. -- ಬಾಕ್ಸ್‌-- ಮತಗಟ್ಟೆ ಹೆಚ್ಚಳ ಜಿಲ್ಲೆಯಲ್ಲಿ ಒಟ್ಟು 1,222 ಮತಗಟ್ಟೆಗಳಿದ್ದು, ಈ ಸಂಖ್ಯೆ 1, 229ಕ್ಕೆ ಏರಿಕೆಯಾಗಿದೆ. ಅಂದರೆ, 7 ಮತಗಟ್ಟೆಗಳು ಹೊಸದಾಗಿ ಸ್ಥಾಪನೆ ಮಾಡಲಾಗಿದೆ. ಈ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 4 ಹಾಗೂ ಕಡೂರು ಕ್ಷೇತ್ರದಲ್ಲಿ 3 ಮತಗಟ್ಟೆಗಳು ಸೇರ್ಪಡೆಗೊಂಡಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. 27 ಕೆಸಿಕೆಎಂ 1 ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಮೀನಾ ನಾಗರಾಜ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಡಿಸಿ ನಾರಾಯಣರೆಡ್ಡಿ ಕನಕ ರೆಡ್ಡಿ ಇದ್ದರು.