ಮೈನವಿರೇಳಿಸಿದ ಜಗಜಟ್ಟಿಗಳ ಕಾಳಗ

| Published : Apr 20 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುಗಳಖೋಡ: ಪಟ್ಟಣದ ಯಲ್ಲಾಲಿಂಗೇಶ್ವರ ಭೃಹನ್ಮಠದಲ್ಲಿ ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರಾಮಹೋತ್ಸದ ಪ್ರಯುಕ್ತ ಆಯೋಜನೆ ಮಾಡಿರುವ ನಿಕಾಲಿ ಜಂಗೀ ಕುಸ್ತಿ ಪಂದ್ಯಾವಳಿಗೆ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಶಿವಯೋಗಿಗಳು ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ, ದೆಹಲಿ, ಹರಿಯಾಣ ಹಾಗೂ ನೇಪಾಳ ದೇಶದ ಪ್ರಸಿದ್ಧ 40 ಜೋಡಿ ಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಕಿರಣ ಭಗತ್, ಏಕನಾಥ್ ಬೇಂದ್ರೆ, ಕುಮಾರ ಮಸಗುಪ್ಪಿ, ದೇವತಾಪ, ಗಜಾನನ ಇಂಗಳಗಿ, ಪರಸು ಸಿಂದಿಹಟ್ಟಿ, ಬೀರದೇವ ಬನಸೋಡೆ, ಶಂಕರ ಟಿಖೋಳಿ, ಸೋಹಿಲ್ ಶೇಖ್, ಅಭಿಷೇಕ ಮುಗಳಖೋಡ, ಮನೋಜ ಸವಸುದ್ದಿ, ಸಂಜು ಪಡಸಲಗಿ, ಚೇತನ ಟಿಖೋಳಿ ಕುಸ್ತಿ ಅಭಿಮಾನಿಗಳ ಮನಗೆದ್ದರು.

ಹರಿಯಾಣದ ನವೀನ ಜೊತೆ ನೇಪಾಳದ ದೇವತಾಪಾ ನಡುವೆ ನಡೆದ ತುರುಸಿನ ಕಾಳಗ ರೊಮಾಂಚನಗೊಳಿಸಿತು. ಪುರಸಭೆ ಸದಸ್ಯರಾದ ಪರಗೌಡ ಖೇತಗೌಡರ, ಹಾಲಪ್ಪ ಶೇಗುಣಸಿ, ಬಿ.ವೈ.ಬನಶಂಕರಿ, ಮುತ್ತಪ್ಪ ಬಾಳೋಜಿ, ಭೀಮಪ್ಪ ಕಟಕಬಾವಿ ಹಾಗೂ ಕ್ರೀಡಾಭಿಮಾನಿಗಳು ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದರು. ಮಾರುತಿ ಕಳ್ಳಿಗುದ್ದಿ ನಿರೂಪಿಸಿದರು.