ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣ ಅಗತ್ಯವಾಗಿದೆ ಎಂದು ಸಾಹಿತಿ ಹಾಗೂ ಮೋಡಿಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ ಹೇಳಿದರು.ಪಟ್ಟಣದ ಆರ್.ಬಿ.ಜಿ. ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಧೋಳ ಆಶ್ರಯದಲ್ಲಿ ದಿ. ಗಂಗವ್ವ ತುಳಸಿಗೇರಿ ದಿ. ಬಸಪ್ಪ ಕೃಷ್ಣಗೌಡರ ಲೋಕಾಪುರ ಜಿಲ್ಲಾ ಸಮ್ಮೇಳನದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ತಾಯಂದಿರು ತಮಗೆ ತಾವೇ ರಕ್ಷಣೆ ಪಡೆದುಕೊಳ್ಳಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಆಕೆ ಪುರುಷನಿಗೆ ಸಮಾನಳು ಎಂಬುದನ್ನು ಸಾಬೀತು ಪಡಿಸಬೇಕು ಎಂದರು. ಎಚ್.ಪಿ.ಎಸ್.ಶಾಲೆಯ ಶಿಕ್ಷಕ ಹಾಗೂ ಉಪನ್ಯಾಸಕರಾದ ಆನಂದ ಶಿರಬೂರ ಮಾತನಾಡಿ, ವ್ಯಕ್ತಿತ್ವ ವಿಕಸನದ ಎಂದರೆ ವ್ಯಕ್ತಿಯ ದೃಷ್ಠಿಕೋನ ಉತ್ಕೃಷ್ಟಗೊಳಿಸುವುದು ಎಂದಲ್ಲ. ವ್ಯಕ್ತಿತ್ವ ವಿಕಸನವು ಉತ್ತಮ ಅಂಕಗಳನ್ನು ಸಾಧಿಸುತ್ತಿಲ್ಲ. ವ್ಯಕ್ತಿತ್ವ ವಿಕಸನವು ಕೇವಲ ಒಂದು ವಿಷಯವಲ್ಲ ಆದರೆ ಅದು ಅನೇಕ ವಿಷಯಗಳ ಸಮೂಹವಾಗಿದೆ. ವ್ಯಕ್ತಿತ್ವ ವಿಕಸನವೆಂದರೆ ನೀವು ಏನಾಗಿದ್ದೀರಿ ಎಂಬ ಜ್ಞಾನ ಇದು ನಿಮ್ಮಲ್ಲಿರುವ ಎಲ್ಲಾ ಲಕ್ಷಣಗಳು, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಒಳಗೊಂಡಿದೆ ಎಂದರು.
ದತ್ತಿ ದಾನಿಗಳು ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಮಾತನಾಡಿ, ಕನ್ನಡ ಭಾಷೆ, ಸಾಹಿತ್ತಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದೂ ಹೆಮ್ಮರವಾಗಿ ಬೆಳೆದು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ನಮ್ಮ ಮಣ್ಣಿನ ಸೊಗಡನ್ನು ಶ್ರೀಮಂತಗೊಳಿಸುತ್ತಿದೆ ಎಂದರು. ಆರ್.ಬಿ.ಜಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಎಸ್.ಜೈನಾಪುರ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಆನಂದ ಎಸ್ ಪೂಜಾರಿ ಮಾತನಾಡಿದರು. ದತ್ತಿ ದಾನಿಗಳಾದ ವಿಷ್ಣು ತುಳಸಿಗೇರಿ, ಎಸ್.ಬಿ.ಕೃಷ್ಣಗೌಡರ, ಎನ್.ವ್ಹಿ.ತುಳಸಿಗೇರಿ ಅವರು ಸಾಹಿತಿ ಹಾಗೂ ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಗೌರವದಿಂದ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಮುಗು ಎಸ್.ಎಫ್.ನಾಯ್ಕ, ವಿಷ್ಣು ತುಳಸಿಗೇರಿ, ಪ್ರವೀಣ ಗಂಗಣ್ಣವರ, ಭೀಮಶಿ ಹೊಸಮನಿ, ಆರ್.ಆರ್.ಕೋಲ್ಹಾರ, ಪಾರ್ವತಿ ಪಾಟೀಲ, ಗೋಪಾಲ ಸಣ್ಣರಾಯಪ್ಪನವರ, ಸುರೇಶ ಸಣ್ಣರಾಯಪ್ಪನವರ, ಎನ್.ವ್ಹಿ.ತುಳಸಿಗೇರಿ ಹಾಗೂ ಆರ್.ಬಿ.ಜಿ.ಕಾಲೇಜು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.