ಮಹಿಳೆಯರಿಗೆ ಶಿಕ್ಷಣದ ಕ್ರಾಂತಿ ಮಾಡಿದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ: ಸಚಿವ ಪಾಟೀಲ

| Published : Jan 05 2024, 01:45 AM IST

ಮಹಿಳೆಯರಿಗೆ ಶಿಕ್ಷಣದ ಕ್ರಾಂತಿ ಮಾಡಿದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ: ಸಚಿವ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಅಸ್ಪ್ರಶ್ಯತೆ ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತಗೊಳಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ ಪಡೆದು ಶಿಕ್ಷಕಿಯಾಗಿ ಎಲ್ಲ ಮಹಿಳೆಯರಿಗೂ ಶಿಕ್ಷಣ ಪಡೆಯುವಂತೆ ಶಾಲೆಗಳನ್ನು ತೆರೆದು ಮಹಿಳೆಯರಿಗೆ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ದೇಶದಲ್ಲಿ ಎಲ್ಲರಿಗೂ ಸಮಬಾಳು ಸಮಪಾಲು ಕಲ್ಪಿಸಿದ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ಮೂಲಕ ನೀಡಿದ್ದಾರೆ. ಅದಕ್ಕಿಂತ ಮೊದಲು ಭಾರತದಲ್ಲಿ ಅಸ್ಪ್ರಶ್ಯತೆ ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತಗೊಳಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರು ಅಂತಹ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ ಶಿಕ್ಷಣ ಪಡೆದು ಶಿಕ್ಷಕಿಯಾಗಿ ಎಲ್ಲ ಮಹಿಳೆಯರಿಗೂ ಶಿಕ್ಷಣ ಪಡೆಯುವಂತೆ ಶಾಲೆಗಳನ್ನು ತೆರೆದು ಮಹಿಳೆಯರಿಗೆ ಶಿಕ್ಷಣ ಕ್ರಾಂತಿ ಮಾಡಿದ ಕ್ರಾಂತಿ ಜ್ಯೋತಿ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಹುಯಿಲಗೋಳ ನಾರಾಯಣರಾವ್ ಸರ್ಕಲ್ (ಟಾಂಗಾ ಕೂಟ್)ದಲ್ಲಿ ಸಮತಾ ಸೇನಾ ಜಿಲ್ಲಾ ಸಂಘಟನೆ ವತಿಯಿಂದ ನಡೆದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ೧೯೪ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತಮ್ಮ ಅಭಿವೃದ್ಧಿ ಸಾಧಿಸಬೇಕು. ಅದರಲ್ಲೂ ದಲಿತ ಮಹಿಳೆಯರೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸುಶಿಕ್ಷಿತರಾಗಬೇಕು ಎಂದರು.

ಸಮತಾ ಸೇನಾ ಜಿಲ್ಲಾ ಸಂಘಟನೆಯ ಅಧ್ಯಕ್ಷ ಕಿರಣ ಗಾಮನಗಟ್ಟಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರು ಅಸ್ಪ್ರಶ್ಯ ಜನಾಂಗದಲ್ಲಿ ಜನಿಸಿ ಅತ್ಯಂತ ಅವಮಾನಗಳನ್ನು ಸಹಿಸಿಕೊಂಡು ಶಿಕ್ಷಣ ಪಡೆದು ಭಾರತ ದೇಶದಲ್ಲಿಯೇ ಪ್ರಥಮ ಶಿಕ್ಷಕಿಯಾಗಿ ಶಿಕ್ಷಣ ಜ್ಯೋತಿಯಾಗಿದ್ದಾರೆ. ಮಹಿಳೆಯರಿಗಾಗಿ ತಾವೇ ತಮ್ಮ ಸ್ವಂತ ಶಾಲೆಗಳನ್ನು ತೆರೆದು ಎಲ್ಲ ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡಿದ ಅಕ್ಷರದ ಅವ್ವ ಎನಿಸಿಕೊಂಡಿದ್ದಾರೆ. ಮಹಿಳೆಯರಿಗಾಗಿ ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ರಾಜ್ಯ ಸರ್ಕಾರ ಆಚರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈ ವೇಳೆ ಲೋಹಿತ ಗಾಮನಗಟ್ಟಿ ಮಾತನಾಡಿದರು. ಸಮಗಾರ ಹರಳಯ್ಯ, ಸಮಾಜದ ಚೇರಮನ್ ಎಸ್.ವೈ.ಅಗಸಿಮನಿ, ಪ್ರೇಮನಾಥ ಗರಗ, ಬಿ.ಬಿ. ಅಸೂಟಿ, ಶಹರ ಪಿಎಸ್‌ಐ ರೇಣುಕಾ ಮುಂಡೆವಾಡಿ, ವಿದ್ಯಾಧರ ದೊಡ್ಡಮನಿ, ರಮೇಶ ಮುಳಗುಂದ, ಭಾಷಾಸಾಬ ಮಲ್ಲಸಮುದ್ರ, ಮುನ್ನಾ ರೇಶ್ಮಿ, ಮಂಜುನಾಥ ಮುಳಗುಂದ, ಶಕುಂತಲಾ ಬಂಡಿ, ಉಮೇಶ ನಿಪ್ಪಾಣಿಕರ, ಮಂಜುನಾಥ ಕೊರವರ, ನವೀನ ಬಂಡಾರಿ, ಡಿ.ಕೆ.ಮುದಗಲ್ಲ, ಹೊನ್ನಪ್ಪ ಸಾಕಿ, ಮಲ್ಲಪ್ಪ ಬಾವಿಮನಿ, ಮೋಹನ ದೊಡಕುಂಡಿ, ಸಂತೋಷ ಬಣಕಾರ, ಹರೀಶ ಹೊಸಮನಿ, ರಾಜು, ಸಾಧಿಕ ಧಾರವಾಡ ಸೇರಿದಂತೆ ಅನೇಕರು ಇದ್ದರು.