ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ

| Published : Jul 24 2025, 01:45 AM IST

ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಮೈಸೂರು ಅರಸ ಚಿಕ್ಕದೇವರಾಯ ಒಡೆಯರ್ ಅಧಿಕಾರವಧಿಯಲ್ಲಿ ಚಲಾವಣೆಯಲ್ಲಿದ್ದ ಕನ್ನಡ ಅಂಕಿಗಳು ಉಳ್ಳ ನಾಣ್ಯಗಳು, ಭಾರತದ ಸ್ವಾತಂತ್ರ ಪೂರ್ವ ಮತ್ತು ನಂತರ ಚಲಾವಣೆ ಕಂಡು ಈಗ ನೇಪಥ್ಯಕ್ಕೆ ಸರಿದಿರುವ ನಾಣ್ಯಗಳು, ನೇತಥ್ಯಕ್ಕೆ ಸರಿದಿರುವ ಹಾಗೂ ಹಾಲಿ ಚಲಾವಣೆಯಲ್ಲಿರುವ ವಿವಿಧ ದೇಶಗಳ ನೋಟುಗಳ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಮನಗರ: ಮೈಸೂರು ಅರಸ ಚಿಕ್ಕದೇವರಾಯ ಒಡೆಯರ್ ಅಧಿಕಾರವಧಿಯಲ್ಲಿ ಚಲಾವಣೆಯಲ್ಲಿದ್ದ ಕನ್ನಡ ಅಂಕಿಗಳು ಉಳ್ಳ ನಾಣ್ಯಗಳು, ಭಾರತದ ಸ್ವಾತಂತ್ರ ಪೂರ್ವ ಮತ್ತು ನಂತರ ಚಲಾವಣೆ ಕಂಡು ಈಗ ನೇಪಥ್ಯಕ್ಕೆ ಸರಿದಿರುವ ನಾಣ್ಯಗಳು, ನೇತಥ್ಯಕ್ಕೆ ಸರಿದಿರುವ ಹಾಗೂ ಹಾಲಿ ಚಲಾವಣೆಯಲ್ಲಿರುವ ವಿವಿಧ ದೇಶಗಳ ನೋಟುಗಳ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಎಂ.ಜಿ.ರಸ್ತೆಯ ಶ್ರೀ ಕನ್ನಿಕಾ ಮಹಲ್‌ನಲ್ಲಿ ನಾಣ್ಯ ಹಾಗೂ ನೋಟುಗಳ ಅಪೂರ್ವ ಪ್ರದರ್ಶನ ನಗರದ ನಾಗರಿಕರ ಪ್ರಶಂಸೆಗೆ ಪಾತ್ರವಾಯಿತು. ಆರ್‌ಬಿಐ ನಿವೃತ್ತ ಅಧಿಕಾರಿ ಅಶೋಕ್ ಟಿ.ಎನ್, ಕನ್ನಡ ನಾಣ್ಯ ಸಂಘದ ಉಪಾಧ್ಯಕ್ಷ ಪಿ.ಸುಬ್ರಹ್ಮಣ್ಯಂ ಶೆಟ್ಟಿ ಮತ್ತು ಕೋಟಕ್ ಮಹೀಂದ್ರ ಬ್ಯಾಂಕಿನ ನಿವೃತ್ತ ಅಧಿಕಾರಿ ಎಮ.ಎನ್.ಮುರಳೀಕೃಷ್ಣ ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಇಲ್ಲಿಯ ವಾಸವಿ ವಿದ್ಯಾನಿಕೇತನ ಟ್ರಸ್ಟ್ ಆಯೋಜಿಸಿತ್ತು.

ನಾಣ್ಯ ಮತ್ತು ನೋಟುಗಳ ಜೊತೆಗೆ ಬರವಣಿಗೆಯಲ್ಲಿ ಪ್ರಯಾಣಿಕರಿಗೆ ಕೊಡುತ್ತಿದ್ದ ವಿಮಾನದ ಟಿಕೆಟ್‌ಗಳು, ರೈಲು ಟಿಕೆಟ್‌ಗಳು, ಪಂಚ್ ಮಾಡಿ ಕೊಡುತ್ತಿದ್ದ ರೈಲು ಟಿಕೆಟ್‌ಗಳು, ಮುಚ್ಚಿ ಹೋದ ಬ್ಯಾಂಕುಗಳ ಚೆಕ್ ಲೀಫ್ ಗಳು ಪ್ರದರ್ಶನದಲ್ಲಿ ಗಮನ ಸೆಳೆಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಜನ್ಮದಿನಾಂಕ ಇರುವ ನೋಟುಗಳು, ಮೈಸೂರು, ಬೆಂಗಳೂರು ನಗರಗಳ ಪಿನ್ ಕೋಡ್ ಸಂಖ್ಯೆಗಳು ಉಳ್ಳ ನೋಟುಗಳನ್ನು ಕಂಡ ನೋಡುಗರು ಅಚ್ಚರಿ ವ್ಯಕ್ತಪಡಿಸಿದರು.

ಅತ್ಯಂತ ಉಪಯುಕ್ತ ಪ್ರದರ್ಶನ:

ಪ್ರದರ್ಶನವನ್ನು ಉದ್ಘಾಟಿಸಿದ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, 1674ಕ್ಕೂ ಹಿಂದಿನ ನಾಣ್ಯಗಳು, ಕನ್ನಡ ಅಂಕಿಗಳು ಉಳ್ಳ ನಾಣ್ಯಗಳು, ಒಂದರಿಂದ ಹತ್ತು ಸಾವಿರ ಮೌಲ್ಯದ ವಿವಿಧ ಕಾಲಘಟ್ಟದಲ್ಲಿ ಬಿಡುಗಡೆಯಾದ ನೋಟುಗಳು ಪ್ರದರ್ಶನದಲ್ಲಿವೆ. ಇವೆಲ್ಲ ಅಪರೂಪದ ಸಂಗತಿಗಳು. ಈ ಅಪೂರ್ವ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸಿದ ಸಂಗ್ರಹಕಾರರ ಆಸಕ್ತಿ ಶ್ಲಾಘನೀಯ ಎಂದು ಪ್ರಶಂಸಿದರು.

ಭಾರತದ ಸಂಪ್ರದಾಯ, ಇತಿಹಾಸವನ್ನು ತಿಳಿಸಿಕೊಡುವುದರಿಂದ ವಿಶೇಷವಾಗಿ ಇಂತಹ ಪ್ರದರ್ಶನಗಳು ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಉಪಯುಕ್ತವಾಗಿವೆ. ಇಂತಹ ಪ್ರದರ್ಶನ ಏರ್ಪಡಿಸಿದ ವಾಸವಿ ವಿದ್ಯಾನಿಕೇತನ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ನಗರಸಭಾ ಸದಸ್ಯರಾದ ಸೋಮಶೇಖರ್ (ಮಣಿ), ಮಹಾಲಕ್ಷ್ಮಿ, ಮಂಜುಳಾರವರು ವಾಸವಿ ವಿದ್ಯಾನಿಕೇತನ ಪರವಾಗಿ ನಾಣ್ಯ ಮತ್ತು ನೋಟು ಸಂಗ್ರಹಕಾರರನ್ನು ಗೌರವಿಸಿದರು. ವಾಸವಿ ವಿದ್ಯಾನಿಕೇತನ ಟ್ರಸ್ಟ್, ಆರ್ಯ ವೈಶ್ಯ ಸಭಾ, ವಾಸವಿ ಯೂತ್ಸ್ ಫೋರಂ, ವಾಸವಿ ವನಿತಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರದರ್ಶನಕ್ಕೆ ಸಹಕಾರ ನೀಡಿದರು.

22ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಎಂ.ಜಿ.ರಸ್ತೆಯ ಶ್ರೀ ಕನ್ನಿಕಾ ಮಹಲ್ ನಲ್ಲಿ ನಾಣ್ಯ ಹಾಗೂ ನೋಟುಗಳ ಅಪೂರ್ವ ಪ್ರದರ್ಶನವನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ವೀಕ್ಷಣೆ ಮಾಡಿದರು.