ಜಿ.ಎಸ್‌.ಟಿ ವಿರೋಧಿಸಿ ಪ್ರತಿಭಟನೆ

| Published : Jul 24 2025, 01:45 AM IST

ಸಾರಾಂಶ

ಸರ್ಕಾರದ ನೀತಿ ಇದೇ ರೀತಿ ಮುಂದುವರೆದೆ ಮುಂದಿನ ದಿನಗಳಲ್ಲಿ ಬೀದಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಹಾಲಿನ ವ್ಯಾಪಾರಿಗಳು, ಕುಟುಂಬಗಳು ಬೀದಿ ಹಿಳಿಯುವುದರಲ್ಲಿ ಅನುಮಾನವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಕೆಲಸವನ್ನು ನಿರೀಕ್ಷೆ ಮಾಡದೆ ಸ್ವಾಲಂಬಿಯಾಗಿ ಬದುಕುತ್ತಿರುವ ಬೀದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಲು ಹೊರಡುತ್ತಿರುವ ಸರ್ಕಾರದ ಆರ್ಥಿಕ ನೀತಿ ಖಂಡನೀಯ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.ಸರ್ಕಾರದ ಆರ್ಥಿಕ ನೀತಿಯು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಡಿಜಿಟಲ್ ಹೆಸರಿನಲ್ಲಿ ವ್ಯಾಪಾರಿಗಳನ್ನು ನಂಬಿಸಿ ಈಗ ಏಕಾಏಕಿ ಯಾವ ಮುನ್ಸೂಚನೆ ನೀಡದೆ ನೋಟಿಸ್‌ನೀಡಿರುವುದು ಎಷ್ಟರಮಟ್ಟಿಗೆ ಸಮಂಜಸ. ಈಗ ಬೀದಿ ವ್ಯಾಪಾರಿಗಳು ಇದರ ಬಗ್ಗೆ ಧ್ವನಿಯೆತ್ತಿದರೆ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸರ್ಕಾರ ಕೈ ತೋರಿಸಿ ಚೆಲ್ಲಾಟವಾಡುತ್ತಿವೆ ಎಂದು ಅವರು ಆರೋಪಿಸಿದರು.ಸರ್ಕಾರದ ನೀತಿ ಇದೇ ರೀತಿ ಮುಂದುವರೆದೆ ಮುಂದಿನ ದಿನಗಳಲ್ಲಿ ಬೀದಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಹಾಲಿನ ವ್ಯಾಪಾರಿಗಳು, ಕುಟುಂಬಗಳು ಬೀದಿ ಹಿಳಿಯುವುದರಲ್ಲಿ ಅನುಮಾನವಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಸಮನ್ವಯ ಸಭೆಯನ್ನು ಕರೆದು ವ್ಯಾಪಾರರು ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಸಭೆಯ ಏರ್ಪಡಿಸಿ ಸಣ್ಣಪುಟ್ಟ ವ್ಯಾಪಾರಿಗಳು ನೆಮ್ಮದಿಯಿಂದ ಬದುಕುವಂತೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇತ್ತೀಚೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಇ ಪೇಪರ್ ಮಾಡುತ್ತೇವೆ ಅಂತ ಹೇಳಿ ಸಾರ್ವಜನಿಕರಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಮತ್ತು ನೋಟಿನ ಮುದ್ರಣ ಕಡಿಮೆ ಮಾಡುವುದಕ್ಕೆ ಗೂಗಲ್ ಪೇ ಮತ್ತು ಫೋನ್ ಪೇ ಆನ್ಲೈನ್ ಪೇಮೆಂಟ್ ಮಾಡಿ ಇದರ ಬಗ್ಗೆ ಜನರಿಗೆ ಸರಿಯಾದ ರೀತಿಯಲ್ಲಿ ಅರಿವು ಮೂಡಿಸಿಲ್ಲ ಎಂದು ಅವರು ದೂರಿದರು.ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮೊದಲಿಗೆ ಪೇಟಿಎಂ ವ್ಯವಹಾರ ಮಾಡಿದರೆ ನಿಮಗೆ ಲಾಭ ಬರುತ್ತದೆ ಎಂದು ಸುಳ್ಳು ಹೇಳಿ ದಿಕ್ಕು ತಪ್ಪಿಸಿತು. ನಂತರ ಬಂದ ಫೋನ್ ಪೇ ಮತ್ತು ಗೂಗಲ್ ಪೇ ಕಂಪನಿ ಅವರು ನೀವು ನಮ್ಮಲ್ಲಿ ವ್ಯವಹರಿಸಿದರೆ ಬೋನಸ್ ಅಂತ ಹೇಳಿ ವ್ಯಾಪಾರಸ್ಥರನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ದೂರಿದರುಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ , ನಾಲಾ ಬೀದಿ ರವಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಗೋಪಿ ಪ್ಯಾಲೇಸ್ ಬಾಬು, ಹರೀಶ್, ಮಹದೇವಸ್ವಾಮಿ, ಸಿದ್ದಪ್ಪ ಎಲ್ಐಸಿ, ಗೋವಿಂದರಾಜು, ಸ್ವಾಮಿ, ಚಿನ್ನಪ್ಪ, ಶಿವಗೌಡ, ಪ್ರೇಮ ಮಾಲಿನಿ, ಪುಷ್ಪಲತಾ, ರಮೇಶ್, ಸ್ವಾಮಿ ಗೈಡ್, ಮಾದಪ್ಪ ಮೊದಲಾದವರು ಇದ್ದರು.