ಸಾರಾಂಶ
ಕೊಡೇಕಲ್: ನಾರಾಯಣಪುರದ ಛಾಯಾ ಭಗವತಿ ದೇವಸ್ಥಾನದ ಬಳಿ ಈಜಲು ಹೋಗಿದ್ದ 6 ಜನ ಸ್ನೇಹಿತರ ಪೈಕಿ, ತಾಳಿಕೋಟಿ ನಿವಾಸಿ ಮಹ್ಮದ್ ಆದಿಲ್ (27) ನೀರು ಪಾಲಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ದೆಹಲಿ ಮೂಲದ ಆದಿಲ್ ತಾಳಿಕೋಟಿಯಲ್ಲಿ ಕ್ಷೌರಿಕನಾಗಿದ್ದು, ಸ್ನೇಹಿತರೊಡನೆ ಬಸವಸಾಗರ ಜಲಾಶಯ ನೋಡಲು ಬಂದಿದ್ದು, ಸಂಜೆಯ ವೇಳೆ ಛಾಯಾ ಭಗವತಿ ದೇವಸ್ಥಾನದ ಬಳಿ ಈಜಲು ತೆರಳಿದಾಗ ಗೃಹರಕ್ಷಕ ದಳದ ಸಿಬ್ಬಂದಿ ಆಣೆಕಟ್ಟಿನಿಂದ 14 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ನದಿಗೆ ಇಳಿಯದಂತೆ ಎಚ್ಚರಿಸಿದ್ದರೂ ಅವರ ಮಾತನ್ನು ಲೆಕ್ಕಿಸದೇ ಯುವಕರೊಡನೆ ಈಜುತ್ತಿರುವಾಗ ನೀರಿನ ಸೆಳುವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪಿ.ಎಸ್.ಐ ರಾಜಶೇಖರ ರಾಠೋಡ ತಿಳಿಸಿದ್ದಾರೆ. ಮೃತದೇಹದ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ನೆರವಿನಿಂದ ಶನಿವಾರ ಶೋಧಕಾರ್ಯ ಮುಂದುವರೆದಿದೆ.
---24ವೈಡಿಆರ್13: ಕೊಡೇಕಲ್ ಸಮೀಪದ ಛಾಯಾಭಗವತಿ ದೇವಸ್ಥಾನದ ಬಳಿ ಈಜಲು ತೆರಳಿ ನೀರು ಪಾಲಾಗಿರುವ ಯುವಕನ ಮೃತದೇಹದ ಪತ್ತೆಗಾಗಿ ಶನಿವಾರ ಶೋಧಕಾರ್ಯ ನಡೆದಿರುವುದು.
-24ವೈಡಿಆರ್12: ಮಹ್ಮದ್ ಆದಿಲ್, ನೀರು ಪಾಲಾದ ಯುವಕ.
---000---