ಸಾರಾಂಶ
ಆನೆಗಳ ತಾಲೀಮಿನ ಹಿನ್ನೆಲೆಯಲ್ಲಿ ದಸರಾ ಜಂಬೂಸವಾರಿ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಗಜರಾಜ ''''''''ಅಭಿಮನ್ಯು''''''''ವಿಗೆ ಬುಧವಾರದಿಂದ ಭಾರ ಹೊರಿಸುವ ತಾಲೀಮು ನೀಡಲಾಯಿತು.ಮರಳಿನ ಮೂಟೆ, ಗಾದಿ ಸೇರಿ ಒಟ್ಟು 500 ಕೆಜಿ ತೂಕವನ್ನು ಅಭಿಮನ್ಯುವಿಗೆ ಹೊರಿಸಲಾಯಿತು. ಅರಮನೆಯಿಂದ ಹೊರಟ ಗಜಪಡೆಯು ಬನ್ನಿಮಂಟಪ ತಲುಪಿತು. ಅಭಿಮನ್ಯು ಸೇರಿದಂತೆ ಒಟ್ಟು ಹನ್ನೆರಡು ಆನೆಗಳು ಬುಧವಾರ ಸಂಜೆ ನಡೆದ ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ಇಂದಿನಿಂದ ಆನೆಗಳಿಗೆ ಭಾರ ಹೊರಿಸುವ ತಾಲೀಮು ಆರಂಭವಾಗಿದ್ದು, ಪ್ರತಿದಿನವೂ ಒಂದೊಂದು ಆನೆಗೆ ಭಾರ ಹೊರಿಸಲಾಗುತ್ತದೆ. ದಿನದಿಂದ ದಿನಕ್ಕೆ ಭಾರವನ್ನು ಹೆಚ್ಚಿಸಲಾಗುತ್ತದೆ. ಕೊನೆಯ ಸುತ್ತಿನ ತಾಲೀಮಿನಲ್ಲಿ ಮರದ ಅಂಬಾರಿಯನ್ನು ಹೊರಿಸಿ 850 ಕೆಜಿಯನ್ನು ಆನೆಯ ಮೇಲೆ ಹೊರಿಸಲಾಗುತ್ತದೆ. ಆನೆಗಳ ತಾಲೀಮಿನ ಹಿನ್ನೆಲೆಯಲ್ಲಿ ದಸರಾ ಜಂಬೂಸವಾರಿ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಲ್ಲದೆ ಆನೆಗಳ ವೀಡಿಯೋ ಮತ್ತು ಭಾವಚಿತ್ರ ತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬಿದ್ದರು. ಮಾರ್ಗದ ಉದ್ದಕ್ಕೂ ಸಾವಿರಾರು ಮಂದಿ ಆನೆಗಳನ್ನು ನೋಡಲು ಸಾಲುಗಟ್ಟಿ ನಿಂತಿದ್ದರು.