ಸಾರಾಂಶ
ರಬಕವಿ ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ತಹಸೀಲ್ದಾರ್ ಗಿರೀಶ ಸ್ವಾದಿ ವಾಲ್ಮೀಕಿಯವರ ಭಾವಚಿತ್ರಕ್ಕ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಹರ್ಷಿ ವಾಲ್ಮೀಕಿ ರಚನೆ ಮಾಡಿದ ರಾಮಾಯಣ ವಿಶ್ವದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದ್ದು, ವಾಲ್ಮೀಕಿಯವರ ತತ್ವ ಸಿದ್ಧಾಂತಗಳು ಇಂದಿನ ದಿನಗಳಲ್ಲಿಯೂ ಪ್ರಸ್ತುತವಾಗಿವೆ ಎಂದು ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.ಗುರುವಾರ ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನಮ್ಮ ಇಂದಿನ ಯುವಕರಿಗೆ ಮಹಾಕಾವ್ಯಗಳ ಮಹತ್ವ ಮತ್ತು ಶ್ರೇಷ್ಠತೆ ತಿಳಿ ಹೇಳಬೇಕು. ರಾಮಾಯಣವು ತಾತ್ವಿಕ, ಆಧ್ಯಾತ್ಮಿಕವಾಗಿ ಮಹತ್ವ ಪಡೆದುಕೊಂಡಿದ್ದು, ಆಳವಾದ ಸತ್ಯ ಹೊಂದಿದೆ ಎಂದರು.
ಶಿರಸ್ತೆದಾರ ಎಸ್.ಆರ್.ಸಾತಿಹಾಳ, ಸಮಾಜ ಕಲ್ಯಾಣ ಇಲಾಖೆ ವಸಂತಯ್ಯ ಹಿರೇಮಠ, ಮಂಜುನಾಥ ಆಲಗೂರ, ಬಿ.ಎಮ್ ಹಳೆಮನಿ, ಸದಾಶಿವ ಕುಂಬಾರ, ಚೇತನ ಭಜಂತ್ರಿ, ರವಿ ಈಟಿ, ಕಾಶಿರಾಮ ನಾಯಕ, ಎಫ್.ಬಿ.ತಳವಾರ, ಕಾಡಪ್ಪ ಮಂಟೂರ, ಮಹಾದೇವ ತಳವಾರ, ಮಹಾದೇವ ತಳವಾರ, ಶಿವಾನಂದ ದೇಸಾಯಿ, ಸುಭಾಸ ತಳವಾರ, ಭೀಮಶಿ ತಳವಾರ, ಅಣ್ಣಾಸಾಬ ಬಾರಿಗಡ್ಡಿ, ನಾಗಪ್ಪ ತಳವಾರ, ಸುರೇಶ ವಾಲೀಕಾರ, ಹನಮಂತ ನಾಯಕ, ಪ್ರಭು ಅಮಾತ್ಯನವರ ಸೇರಿದಂತೆ ಅನೇಕರು ಇದ್ದರು.