ಗುಡುಗು, ಸಿಡಿಲಿನ ಅನಾಹುತ ತಗ್ಗಿಸಲು ಸಲಹೆ

| Published : Apr 21 2025, 12:48 AM IST

ಗುಡುಗು, ಸಿಡಿಲಿನ ಅನಾಹುತ ತಗ್ಗಿಸಲು ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಹವಾಮಾನ ವರದಿಯನ್ನು ಗಮನಿಸಿ, ಮಳೆ, ಗುಡುಗು, ಸಿಡಿಲಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು. ಕಿಟಿಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಅವುಗಳಿಂದ ದೂರವಿರಬೇಕು. ಸಿಡಿಲಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳಾದ ಟಿ.ವಿ. ಎಸಿ, ಫ್ಯಾನ್ ಗಳ ಪ್ಲಗ್ ತೆಗೆದು ಆಫ್ ಮಾಡಿ, ಸ್ಥಿರ ದೂರವಾಣಿ ಬಳಸಬೇಡಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನು ನೀಡಿದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆಯಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದಂತೆ ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಸನ್ನದ್ದತಾ ಕ್ರಮಗಳ ಬಗ್ಗೆ ಹಾಗೂ ಪಾಲಿಸಬೇಕಾದ ಸಲಹೆ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದರು.ಮುಂಜಾಗ್ರತಾ ಕ್ರಮಗಗಳುಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಭಿವೃದ್ಧಿ ಪಡಿಸಿರುವ “ಸಿಡಿಲು ಆ್ಯಪ್” ನಲ್ಲಿ ಪಡೆಯಬಹುದು ಮತ್ತು ಅಲರ್ಟ್ ಪಡೆಯಲು ಎನ್ಡಿಎಂಎ ಅಭಿವೃದ್ಧಿ ಪಡಿಸಿರುವ “ಸ್ಯಾಚೆಟ್ ಆ್ಯಪ್” ನಲ್ಲಿ ಸಹ ಪಡೆಯಬಹುದು. ಹವಾಮಾನ ವರದಿಯನ್ನು ಗಮನಿಸಿ, ಮಳೆ, ಗುಡುಗು, ಸಿಡಿಲಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು. ಕಿಟಿಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಅವುಗಳಿಂದ ದೂರವಿರಬೇಕು. ಸಿಡಿಲಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳಾದ ಟಿ.ವಿ. ಎಸಿ, ಫ್ಯಾನ್ ಗಳ ಪ್ಲಗ್ ತೆಗೆದು ಆಫ್ ಮಾಡಿ, ಸ್ಥಿರ ದೂರವಾಣಿ ಬಳಸಬೇಡಿ ಎಂದರು.

ಇಂತಹ ಸಂರ್ಭದಲ್ಲಿ ನಲ್ಲಿ ಮುಖಾಂತರ ನೀರನ್ನು ಬಳಸಿ ಕೈ ತೊಳೆಯುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಹಾಗೂ ಇತರೆ ಕೆಲಸಗಳನ್ನು ಮಾಡುವುದು ಸುರಕ್ಷಿತವಲ್ಲ. ಅದರ ಬದಲಿಗೆ ಮನೆಯಲ್ಲಿ ಶೇಖರಿಸಿಟ್ಟ ನೀರನ್ನು ಉಪಯೋಗಿಸಬೇಕು. ಹಸು ಮತ್ತು ಸಾಕು ಪ್ರಾಣಿಗಳನ್ನು ಹೊರಗೆ ಕಟ್ಟಬೇಡು. ಮಳೆ ಮತ್ತು ಗುಡುಗಿನ ಸಂದರ್ಭದಲ್ಲಿ ಮನೆಯಿಂದ ಹೊರಗೆ ಇದ್ದರೆ, ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ತಿಳಿಸಿದರು.

ಎತ್ತರದ ಪ್ರದೇಶಗಳ ಬದಲು ತಗ್ಗಿನ ಪ್ರದೇಶಕ್ಕೆ ಬನ್ನಿ, ಪಾದಗಳನ್ನು ಪರಸ್ಪರ ಮುಟ್ಟಿಸಿ, ತಲೆ ತಗ್ಗಿಸಿ, ಕಿವಿ ಮುಚ್ಚಿ ಕುಳಿತುಕೊಳ್ಳಿ. ನೆಲದ ಮೇಲೆ ಮಲಗಬೇಡಿ. ನೀರಿನ ಬಳಿ ನಿಲ್ಲಬೇಡಿ, ಕೆರೆ, ಕುಂಟೆ, ಕೃಷಿ ಹೊಂಡಗಳಿಂದ ಹೊರಗೆ ಬನ್ನಿ. ಸಿಡಿಲು ಬಡಿದ ವ್ಯಕ್ತಿಯಲ್ಲಿ ವಿದ್ಯುತ್ ಸಂಚರಿಸುವುದಿಲ್ಲ. ಅವರನ್ನು ಮುಟ್ಟಿದರೆ ಅಪಾಯವಾಗುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯನ್ನು ತಕ್ಷಣವೆ ಪ್ರಥಮ ಚಿಕಿತ್ಸೆ ಮಾಡಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ತಿಳಿಸಿದರು.