ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಘೀ, ಚಿಕೂನ್ ಗುನ್ಯ, ಮಲೇರಿಯಾ, ಮೆದುಳು ಜ್ವರ, ಜಿಕ್ ಹಾಗೂ ಆನೆ ಕಾಲು ರೋಗಗಳ ನಿಯಂತ್ರಣ ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಘೀ ದಿನಾಚರಣೆ ಪ್ರಯುಕ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಡೆಂಘೀ ನಿಯಂತ್ರಣ ಕುರಿತು ಏರ್ಪಸಿದ್ದ ಅಡ್ವೋಕೆಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ರೋಗಗಳ ಲಕ್ಷಣಗಳು, ಹರಡುವಿಕೆ, ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಅವರು ಲಾರ್ವ ಪ್ರಾತ್ಯಕ್ಷಿಕೆ ಮೂಲಕ ಸೊಳ್ಳೆಗಳ ಜೀವನ ಚಕ್ರ ಹಾಗೂ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನುಗಳ ಮಹತ್ವದ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರತಿ ಶುಕ್ರವಾರ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಒಳಗೆ ಹಾಗೂ ಸುತ್ತಮುತ್ತ ಸ್ವಯಂ ತಾವೇ ಲಾರ್ವ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವ ಚಟುವಟಿಕೆ ನಡೆಸಲಾಗುತ್ತಿದೆ.ಎಲ್ಲಾ ಕಚೇರಿ ಹಾಗೂ ಶಾಲಾ- ಕಾಲೇಜುಗಳ ಆವರಣದಲ್ಲೂ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವುದು ಹಾಗೂ ಅಧಿಕಾರಿಗಳ ಪಾತ್ರ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ತಾಪಂ ಯೋಜನಾಧಿಕಾರಿ ಎಂ.ಎಂ.ತ್ರಿವೇಣಿ, ಡಿವಿಬಿಡಿಸಿಪಿ ಕಚೇರಿ ಮೇಲ್ವಿಚಾರಕ ಶಿವಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್, ಪಣೀಂದ್ರ, ಮೇಘನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ, ತಾಪಂ ಐಇಸಿ ಸಂಯೋಜಕಿ ಸುಮ ಸೇರಿದಂತೆ ಪಿಡಿಒ ಹಾಜರಿದ್ದರು.ಮೇ 27 ಬಾದಾಮಿ ಅಮಾವಾಸ್ಯೆ, ಶನೇಶ್ವರಸ್ವಾಮಿ ಜಯಂತಿ
ಮಳವಳ್ಳಿ: ತಾಲೂಕಿನ ತೆಂಕಹಳ್ಳಿಯ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಮೇ 27ರಂದು ಬಾದಾಮಿ ಅಮವಾಸ್ಯೆ ಮತ್ತು ಶನೇಶ್ವರಸ್ವಾಮಿ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಅಂದು ಬೆಳಿಗ್ಗೆಯಿಂದ ದೇವಸ್ಥಾನದ ಪ್ರಧಾನ ಅರ್ಚಕ ಟಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ದೇವರಿಗೆ ಹಲವು ಪೂಜಾ ಕೈಂಕರ್ಯಗಳೊಂದಿಗೆ ಆರಂಭವಾಗಿ ನಂತರ ಶನೇಶ್ವರಸ್ವಾಮಿ ಉತ್ಸವ ಮೂರ್ತಿ, ಬಸಪ್ಪನ ಮೆರವಣಿಗೆ ಹಾಗೂ ಅನ್ನಸಂಪರ್ಪಣೆ ನಡೆಯಲಿದೆ.
ರಾತ್ರಿ 8 ಗಂಟೆಗೆ ತಾಲೂಕಿನ ಮಾದಹಳ್ಳಿಯ ಮಳವಳ್ಳಿ ಶಂಭುಲಿಂಗೇಶ್ವರ ಜನರಲ್ ಸ್ಟೋರ್ಸ್ ಮಾಲೀಕರಾದ ಗೌರಮ್ಮ ಮತ್ತು ದಿ.ಮಾದೇಗೌಡ (ಶನಿದೇವರ ತಮ್ಮಡಪ್ಪ)ರ ಸ್ಮರಣಾರ್ಥ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಹನುಮಂತನಗರದ ಗೋವಿಂದರಾಜ್ ಅವರ ನಿರ್ದೇಶನದ ಶನಿಪ್ರಭಾವ ಅಥವಾ ರಾಜವಿಕ್ರಮ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪುಟ್ಟೇಗೌಡ(ಪುಟ್ಟು) ತಿಳಿಸಿದ್ದಾರೆ.