ಕೃಷಿ ಚಟುವಟಿಕೆಗೆ ಅಗತ್ಯ1,053 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು

| Published : May 23 2024, 01:08 AM IST / Updated: May 23 2024, 01:09 AM IST

ಕೃಷಿ ಚಟುವಟಿಕೆಗೆ ಅಗತ್ಯ1,053 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮುಂಗಾರು ಮಳೆ ಪ್ರತಿದಿನ ಎಂಬಂತೆ ಆರ್ಭಟಿಸುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಕೃಷಿ ಇಲಾಖೆ ರೈತರಿಗೆ ಅಗತ್ಯವಿದ್ದಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿದೆ. ತಾಲೂಕಿನ ರೈತರಿಗೆ ವಾರ್ಷಿಕ 10,100 ಮೆಟ್ರಿಕ್‌ ಟನ್‌ ರಸ ಗೊಬ್ಬರದ ಬೇಡಿಕೆ ಇದ್ದು ಪ್ರಸ್ತುತ 11 ಸಹಕಾರ ಸಂಘ ಹಾಗೂ ಇತರ ಖಾಸಗಿ ಗೊಬ್ಬರದ ಅಂಗಡಿ ಸೇರಿ 1, 053 ಮೆಟ್ರಿಕ್‌ ಟನ್‌ ರಸ ಗೊಬ್ಬರ ದಾಸ್ತಾನು ಇದೆ.

- ನರಸಿಂಹರಾಜಪುರದಲ್ಲಿ ವಾಡಿಕೆ ಮಳೆಗಿಂತ 141 ಮಿ.ಮೀ ಮಳೆ ಜಾಸ್ತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮುಂಗಾರು ಮಳೆ ಪ್ರತಿದಿನ ಎಂಬಂತೆ ಆರ್ಭಟಿಸುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಕೃಷಿ ಇಲಾಖೆ ರೈತರಿಗೆ ಅಗತ್ಯವಿದ್ದಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿದೆ. ತಾಲೂಕಿನ ರೈತರಿಗೆ ವಾರ್ಷಿಕ 10,100 ಮೆಟ್ರಿಕ್‌ ಟನ್‌ ರಸ ಗೊಬ್ಬರದ ಬೇಡಿಕೆ ಇದ್ದು ಪ್ರಸ್ತುತ 11 ಸಹಕಾರ ಸಂಘ ಹಾಗೂ ಇತರ ಖಾಸಗಿ ಗೊಬ್ಬರದ ಅಂಗಡಿ ಸೇರಿ 1, 053 ಮೆಟ್ರಿಕ್‌ ಟನ್‌ ರಸ ಗೊಬ್ಬರ ದಾಸ್ತಾನು ಇದೆ. ಇದರಲ್ಲಿ ಯೂರಿಯ 261 ಮೆಟ್ರಿಕ್‌ ಟನ್‌, ಡಿಎಪಿ 62 ಮೆಟ್ರಿಕ್ ಟನ್‌, ಸೂಪರ್‌ ಪಾಸ್ಪೇಟ್‌ 27.2, ಪೊಟ್ಯಾಶ್‌ 161.6 ಎನ್‌.ಪಿ.ಕೆ ಕಾಂಪ್ಲೆಕ್ಷ್ 515.66, ರಾಕ್‌ ಪಾಸ್ಪೇಟ್‌ 25.8 ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಸಹಾಯಕ ಕೃಷಿ ನಿರ್ದೇಶಕ ಮಹೇಶ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ತಾಲೂಕಿನಲ್ಲಿ ಮಳೆ ಆಗುತ್ತಿರುವುದರಿಂದ ಅಡಕೆ, ಕಾಫಿಗೆ ಈಗಾಗಲೇ ರೈತರು ಮುಂಗಾರು ಪೂರ್ವದ ರಸ ಗೊಬ್ಬರ ನೀಡಲು ಪ್ರಾರಂಭಿಸಿದ್ದಾರೆ. ಭತ್ತದ ಗದ್ದೆಗೆ ಕಾಂಪೊಸ್ಟ್‌ ಬದಲಿಗೆ ಕೆಲವು ರೈತರು ಹಸಿರಿಲೆ ಗೊಬ್ಬರವಾಗಿ ಸೆಣಬು ಬೆಳೆಸಿ ದ್ದಾರೆ. ಇನ್ನು ಕೆಲವು ರೈತರು ಡಯಾಂಚ ಬೆಳೆಸಿದ್ದಾರೆ. 1 ತಿಂಗಳ ನಂತರ ಸೆಣಬು, ಡಯಾಂಚ ಗಿಡದೊಂದಿಗೆ ರೈತರು ಭೂಮಿ ಉಳುಮೆ ಮಾಡುವುದರಿಂದ ಭತ್ತದ ಗದ್ದೆಗಳಿಗೆ ಉತ್ತಮ ಕಾಂಪೋಸ್ಟು ಗೊಬ್ಬರ ಸಿಕ್ಕಿದಂತಾಗುತ್ತದೆ.

--- ಬಾಕ್ಸ್ ---

ಈ ವರ್ಷ ವಾಡಿಕೆ ಮಳೆಗಿಂತ ಮಳೆ ಜಾಸ್ತಿ ಬಿದ್ದಿದೆ. ಜನವರಿ 1 ರಿಂದ ಮೇ 21 ರ ವರೆಗೆ ವಾಡಿಕೆ ಮಳೆ 117 ಮಿ.ಮೀ. ಮಳೆ ಬೀಳಬೇಕಾಗಿತ್ತು. ಆದರೆ, 258 ಮಳೆ ಬಿದ್ದಿದ್ದು 141 ಮಿ.ಮೀ. ಹಾಗಾಗಿ ಮಳೆ ಜಾಸ್ತಿ ಬಿದ್ದಂತಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ 117 ಮಿ.ಮೀ. ಮಳೆ ಬೀಳಬೇಕಾಗಿತ್ತು. ಮಳೆ ಬಂದಿದ್ದು 116 ಮಿ.ಮೀ. ಮಳೆ ಬಿದ್ದಿದೆ.

ಬಾಳೆಹೊನ್ನೂರು ಹೋಬಳಿಯಲ್ಲಿ ವಾಡಿಕೆ ಮಳೆ 202 ಮಿ.ಮೀ. ಬೀಳಬೇಕಾಗಿದ್ದು 288 ಮಿ.ಮೀ. ಮಳೆ ಬಿದ್ದಿದ್ದು 88 ಮಿ.ಮೀ. ಮಳೆ ಜಾಸ್ತಿ ಬಿದ್ದಿದೆ.