ಸಾರಾಂಶ
ರತ್ನಪ್ರಭಾ ಅವರ ನಂತರ ಮತ್ತೋಮ್ಮೆ ಒಬ್ಬ ಮಹಿಳಾ ಅಧಿಕಾರಿಯಾದ ಶಿಲ್ಪಾ ಶರ್ಮಾ ಅವರ ಹೆಗಲಿಗೆ ಜಿಲ್ಲೆ ಅಭಿವೃದ್ಧಿ ಜವಾಬ್ದಾರಿ ರಾಜ್ಯ ಸರ್ಕಾರ ಹಾಕಿದೆ.
ಬೀದರ್: ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ರತ್ನಪ್ರಭಾ ಅಧಿಕಾರ ನಡೆಸಿದ್ದರೆ, ಈಗ ಸರಿ ಸುಮಾರು 28 ವರ್ಷದ ನಂತರ ಮತ್ತೆ ಮಹಿಳೆಗೆ ಜಿಲ್ಲೆಯ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಹೌದು ಪಕ್ಕದ ತೆಲಂಗಾಣಾ ರಾಜ್ಯದ ಮೂಲದವರಾದ ಪ್ರಥಮ ಜಿಲ್ಲಾಧಿಕಾರಿಯಾಗಿದ್ದ ರತ್ನಪ್ರಭಾ ಅವರು ಬೀದರ್‌ನಲ್ಲಿಯೇ ಸಹಾಯಕ ಆಯುಕ್ತರಾಗಿ ನಂತರ ಇಲ್ಲಿಯೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆ ಪಡೆದಿದ್ದರು. ರತ್ನಪ್ರಭಾರ ಕಾರ್ಯ ವೈಖ್ಯರಿ ಇಂದಿಗೂ ಜನರ ನೆನಪಿಸುತ್ತಾರೆ. ಒಬ್ಬ ಮಹಿಳೆಯಾಗಿಯೂ ಪುರುಷರು ಮಾಡಲಾರದಂತಹ ಅನೇಕ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಿದ್ದರು. ಅವರು ನಿವೃತ್ತರಾಗಿದ್ದರು ಕೂಡ ಜಿಲ್ಲೆಯ ಅನೇಕ ಹಿರಿಯರು ಅವರ ಕಾರ್ಯಕ್ಕೆ ಇನ್ನು ಮೆಚ್ಚುಗೆ ಮಾತಾಡುತ್ತಾರೆ.ಜಿಲ್ಲೆ ಅಭಿವೃದ್ಧಿ ಜವಾಬ್ದಾರಿ ಶಿಲ್ಪಾ ಹೆಗಲಿಗೆ:ರತ್ನಪ್ರಭಾ ಅವರ ನಂತರ ಮತ್ತೋಮ್ಮೆ ಒಬ್ಬ ಮಹಿಳಾ ಅಧಿಕಾರಿಯಾದ ಶಿಲ್ಪಾ ಶರ್ಮಾ ಅವರ ಹೆಗಲಿಗೆ ಜಿಲ್ಲೆ ಅಭಿವೃದ್ಧಿ ಜವಾಬ್ದಾರಿ ರಾಜ್ಯ ಸರ್ಕಾರ ಹಾಕಿದೆ. ಶಿಲ್ಪಾ ಶರ್ಮಾ ಅವರು 2015ರ ಐಎಎಸ್ ಬ್ಯಾಚಿನ ಅಧಿಕಾರಿಯಾಗಿದ್ದು ಈ ಹಿಂದೆ ಶಿಲ್ಪಾ ಅವರು 2018ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ನಂತರ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಬೀದರ್ ಜಿಲ್ಲೆಯ ಜನರು ಮುಗ್ದರಾಗಿದ್ದು, ಅಧಿಕಾರಿಗಳ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುವ ಪ್ರವೃತ್ತಿ ಹೊಂದಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಇಲ್ಲಿಯವರೆಗೆ ಅಭಿವೃದ್ಧಿ ಮಾಡುವ ಅಧಿಕಾರಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಹೀಗಾಗಿ ಶಿಲ್ಪಾ ಶರ್ಮಾ ಅವರು ಜಿಲ್ಲೆಯ ಜನರ ಸಹಕಾರದೊಂದಿಗೆ ಜನ ಮೆಚ್ಚುವಂತಹ ಕಾರ್ಯ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.