ಸಾರಾಂಶ
ಕೆಜಿಎಫ್: ರಾಬರ್ಟ್‌ಸನ್‌ಪೇಟೆ ವೃತ್ತದ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಸುಮಾರು ೫,೪೦,೦೦೦ ರು. ಮೌಲ್ಯದ ೬ ಕೆಜಿ ೭೪೫ ಗ್ರಾಂ ಒಣ ಗಾಂಜಾ ಮತ್ತು ಕಾರು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಾಂಡಹಳ್ಳಿ ಹೊರವಲಯದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಎಚ್.ರಾಮಕೃಷ್ಣಯ್ಯ ಮತ್ತು ಸಿಬ್ಬಂದಿ ಕೂಡಲೇ ದಾಳಿ ನಡೆಸಿ, ಕೆಜಿಎಫ್ ಚಾಂಪಿಯನ್ ರೀಫ್ಸ್ ಜೆ ಬ್ಲಾಕ್‌ನ ನಿವಾಸಿ ಸುರೇಂದ್ರನ್, ಕುಪ್ಪಂ ಸಮೀಪದ ಪೆದ್ದಕುರುಬಾಲಪಲ್ಲಿಯ ಶ್ರೀಕಾಂತ್, ಬೆಂಗಳೂರಿನ ಬಸವೇಶ್ವರ ನಗರದ ಸಂತೋಷ್, ರಾಮಕುಪ್ಪಂ ಸಮೀಪದ ಜಾಂಪೂರು ಮೋಹನ್‌ರೆಡ್ಡಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ೫,೪೦,೦೦೦ ಲಕ್ಷ ರು. ಮೌಲ್ಯದ ೬ ಕೆಜಿ ೭೪೫ ಗ್ರಾಂ ಒಣ ಗಾಂಜಾ ಸಾಗಿಸುತ್ತಿದ್ದ ಮಾರುತಿ ಎಸ್-ಪ್ರೆಸ್ಸೋ ಕಾರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ಸಿ.ಎಚ್.ರಾಮಕೃಷ್ಣಯ್ಯ, ಸಿಬ್ಬಂದಿ ಗೋಪಿನಾಥ್, ಮಂಜುನಾಥ್, ರಘು, ಮುರಳಿ, ಬಸವರಾಜ ಕಾಂಬ್ಳೆ, ಗಜೇಂದ್ರ, ನಂದಕುಮಾರ್, ಚಾಲಕ ಸತ್ಯಪ್ರಕಾಶ್ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))