ಸಾರಾಂಶ
ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಕೆ. ಶಾಂತಾರಾಮ ಕಾಮತ್ ಸಾಂಸ್ಕೃತಿಕ ಕಲಾಮಂಟಪದಲ್ಲಿ ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ಕವನಸಂಕಲನ ‘ಸಮರ್ಪಣ’ವನ್ನು ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಕಾರ್ಕಳ
ಮನಸ್ಸಿಗೆ ಮುದ ನೀಡುವ, ಜೀವನಕ್ಕೆ ಹಿತ ಒದಗಿಸುವ ಸಾಧನವೇ ಸಾಹಿತ್ಯ ಪ್ರಕಾರ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳು ಕೂಡ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಲೆ, ಸಾಹಿತ್ಯ ಸಂಗೀತದಿಂದ ಆಧ್ಯಾತ್ಮದ ಅನುಸಂಧಾನ ಕೂಡ ಸಾಧ್ಯವಿದೆ ಎಂದು ಮುದ್ರಾಡಿಯ ಎನ್‌ಎಸ್‌ಡಿಎಂ ಅನುದಾನಿತ ಪ್ರಾಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.ಅವರು ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಕೆ. ಶಾಂತಾರಾಮ ಕಾಮತ್ ಸಾಂಸ್ಕೃತಿಕ ಕಲಾಮಂಟಪದಲ್ಲಿ ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ಕವನಸಂಕಲನ ‘ಸಮರ್ಪಣ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸುಬ್ರಮಣ್ಯ ಉಪಾಧ್ಯ, ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕಿ ಲಕ್ಷ್ಮೀ ಹೆಗ್ಡೆ, ವಿಶ್ರಾಂತ ಪತ್ರಕರ್ತ ಕೆ. ಪದ್ಮಾಕರ ಭಟ್, ಉದ್ಯಮಿ ಹರೀಶ ಶೆಣೈ, ಚಾರ್ಟರ್ಡ್ ಅಕೌಂಟೆಂಟ್ ರಂಜನ್ ಭಾವೆ, ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅರ್ಚನಾ ಭಾವೆ ಉಪಸ್ಥಿತರಿದ್ದರು.ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿದರು. ಕವಯಿತ್ರಿ ಪ್ರಜ್ವಲಾ ಶೆಣೈ ಕೃತಿಯ ಕುರಿತು ಮಾತನಾಡಿದರು. ಹೊಸ ಸಂಜೆ ಬಳಗ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಧಾರಿಣಿ ವಂದಿಸಿದರು.