ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣಗಳ ತನಿಖೆ ಬೇಡ: ದಸಂಸ

| Published : Jun 24 2024, 01:40 AM IST

ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣಗಳ ತನಿಖೆ ಬೇಡ: ದಸಂಸ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರ ಮೇಲೆ ನಡೆಯುವ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣಗಳ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದ ಸುಪರ್ದಿಗೆ ನೀಡುವಂತೆ ದಲಿದ ಸಂಘರ್ಷ ಸಮಿತಿ ಆಗ್ರಹ ಪಡಿಸಿದೆ.

- ನಾಗರಿಕ ಹಕ್ಕು ಜಾರಿ ಸುಪರ್ದಿಗೆ ನೀಡಲು ಮನವಿ

-33 ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಅನುಮೋದನೆ

-------------

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದಲಿತರ ಮೇಲೆ ನಡೆಯುವ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣಗಳ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದ ಸುಪರ್ದಿಗೆ ನೀಡುವಂತೆ ದಲಿದ ಸಂಘರ್ಷ ಸಮಿತಿ ಆಗ್ರಹ ಪಡಿಸಿದೆ.ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ರಾಜ್ಯ ಸರ್ಕಾರ ಸಚಿವ ಸಂಪುಟದ ಸಭೆಯಲ್ಲಿ ಹೊಸದಾಗಿ ಜಿಲ್ಲಾವಾರು 33 ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸ್ಥಾಪನೆಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ನಾಗರಿಕರ ಇತರೆ ಹಕ್ಕುಗಳ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಗೃಹ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ನೀತಿ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಜವಾಬ್ದಾರಿ ನೀಡಿದೆ. ಎಸ್ಸಿ, ಎಸ್ಟಿ ಕಾಯ್ದೆ ಅನ್ವಯ ಪ್ರತ್ಯೇಕ ಪೊಲೀಸ್ ಠಾಣೆ ತೆರೆದು ಪರಿಶಿಷ್ಟರಿಗೆ ನ್ಯಾಯ ಒದಗಿಸಲು ಕಾನೂನಿನಲ್ಲಿ ಅವಕಾಶ ಇದೆ. ಪೊಲೀಸ್ ಠಾಣೆ ಹೊರತಾಗಿ ಅಟ್ರಾಸಿಟಿ ಪ್ರಕರಣಗಳನ್ನು ಸಂಪೂರ್ಣವಾಗಿ ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನೀಡಲು ಹಕ್ಕೊತ್ತಾಯ ಮಾಡುತ್ತೇವೆ. ಪೊಲೀಸ್ ಠಾಣೆ ಸಿಬ್ಬಂದಿಗಳ ಕಾರ್ಯ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲು ಪ್ರತ್ಯೇಕ ಮಹಿಳಾ ಠಾಣಾ ರೀತಿಯಲ್ಲಿ ಇನ್ನು ಮುಂದೆ ನಾಗರೀಕ ಹಕ್ಕು ಜಾರಿ ನಿರ್ದೆಶನಾಲಯಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕೆಂದು ಮನವಿ ಮಾಡಿದರು.ಅಟ್ರಾಸಿಟಿ ಪ್ರಕರಣಗಳನ್ನು ಪೊಲೀಸ್ ಠಾಣೆಯಿಂದ ಬೇರ್ಪಡಿಸಿ, ನಾಗರೀಕ ಹಕ್ಕು ಜಾರಿ ನಿರ್ದೇಶನಾಯಲಯಕ್ಕೆ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶ ನೀಡಬೇಕು. ಪ್ರತಿ ಜಿಲ್ಲೆಗೆ ಅಟ್ರಾಸಿಟಿ ಕಾಯ್ದೆ ಪ್ರಕಾರ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.ಅಟ್ರಾಸಿಟಿ ಸಂತ್ರಸ್ಥರಿಗೆ ಪುರ್ನವಸತಿ ಕಲ್ಪಿಸಲು ಆಕಸ್ಮಿಕ (ಕಂಟೆನ್ಜೆನ್ಸಿ) ಯೋಜನೆಯಡಿ ಪ್ರತ್ಯೇಕ ವಾರ್ಷಿಕ ಬಜೆಟ್ ರೂಪಿಸಬೇಕೆಂದು ರಾಜಣ್ಣ ಒತ್ತಾಯಿಸಿದರು.ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರ ಪಾರದರ್ಶಕವಾಗಿ ಸಂತ್ರಸ್ಥರಿಗೆ ಭೂಮಿ, ನಿವೇಶನ, ಉದ್ಯೋಗ, ಮತ್ತು ಸಾಲಸೌಲಭ್ಯ ಒದಗಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರವೇ ಜಾರಿಗೊಳಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಅಲ್ಲದೇ ಕಾನೂನು ಪ್ರಕಾರ ಸಂತ್ರಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು. ಸಂತ್ರಸ್ಥರಿಗೆ ಕಾಯ್ದೆಯ ಅರಿವು ಮೂಡಿಸಲು ಸರ್ಕಾರಿ ಸೌಲಭ್ಯದ ಬಗ್ಗೆ ಕಾರ್ಯಾಗಾರ ಏರ್ಪಡಿಸುವುದು ತುರ್ತು ಅನಿವಾರ್ಯವೆಂದರು.ಪೊಲೀಸ್ ಠಾಣೆಗಳಲ್ಲಿ ಅಟ್ರಾಸಿಟಿ ಪ್ರಕರಣಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗುತ್ತಿಲ್ಲ. ಅದಕ್ಕೊಂದು ವ್ಯವಸ್ಥಿತ ಸ್ವರೂಪ ನೀಡಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅವಶ್ಯಕತೆ ಇದೆ. ಇದುವರೆಗೂ ನಾಲ್ಕು ಜಿಲ್ಲೆಗೆ ಒಂದರಂತೆ ಕಾರ್ಯನಿರ್ವಹಿಸುತ್ತಿದ್ದ ಈ ಕಚೇರಿಗಳು ಇದೀಗ ಪ್ರತಿ ಜಿಲ್ಲೆಯಲ್ಲಿಯೂ ಆರಂಭವಾಗುತ್ತಿರುವುದು ದೌರ್ಜನ್ಯ ತಡೆ ಕಾಯ್ದೆಗೆ ಶಕ್ತಿ ತುಂಬಿದಂತಾಗಿದೆ ಎಂದು ರಾಜಣ್ಣ ಹೇಳಿದರು.ಹುಲ್ಲೂರು ಕುಮಾರಸ್ವಾಮಿ, ಸಮಿತಿ ರಾಜ್ಯ ಉಪಾಧ್ಯಕ್ಷ ಹೆಚ್. ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್.ಪಿ ಕವಾಡಿಗರಹಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಅಂಜಿನಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶ್ವರ್, ಪದಾಧಿಕಾರಿಗಳಾದ ಕೋಟೇಶ, ಅಣ್ಣಪ್ಪ, ರಮೇಶ ಭೋವಿ, ಮಹಂತೇಶ ಸುದ್ದಿಗೋಷ್ಟಿಯಲ್ಲಿದ್ದರು.

23 ಸಿಟಿಡಿ1-----------

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಾಜಣ್ಣ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.