ಬಾ ನಲ್ಲೆ ಹನಿಗವನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

| Published : Jan 05 2024, 01:45 AM IST

ಸಾರಾಂಶ

ಒಬ್ಬ ಕವಿಗೆ ಭಾಷಾ ಪಾಂಡಿತ್ಯವಿರಬೇಕು. ಚಮತ್ಕಾರದ ರೀತಿಯಲ್ಲಿ ಶಬ್ದಗಳನ್ನು ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಹೇಳಬೇಕಾದ ವಿಷಯವನ್ನು ಕೆಲವೇ ಪದಗಳಲ್ಲಿ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ನೇರವಾಗಿ ಹೇಳಬೇಕು. ಹಾಗಾದಾಗಲೇ ಆತನೊಬ್ಬ ಯಶಸ್ವಿ ಕವಿಯಾಗಲು ಸಾಧ್ಯವಾಗುತ್ತದೆ.

ಕುಕನೂರು: ಸಾಹಿತಿ, ಉಪನ್ಯಾಸಕ ಭೋಜರಾಜ ಸೊಪ್ಪಿಮಠ ರಚಿಸಿದ ಬಾ ನಲ್ಲೆ ಹನಿಗವನ ಕವನ ಸಂಕಲನ ಇತ್ತೀಚೆಗೆ ಗದುಗಿನ ತೋಂಟದಾರ್ಯ ಮಠದಲ್ಲಿ ತೋಂಟದಾರ್ಯ ಶ್ರೀಗಳಿಂದ ಬಿಡುಗಡೆಯಾಯಿತು.ಸಾಹಿತಿ ಭೋಜರಾಜ ಸೊಪ್ಪಿಮಠ ಅವರ ಲೋಕಾರ್ಪಣೆಯಾದ ಎರಡನೇ ಪುಸ್ತಕ ಇದಾಗಿದೆ. ಕವನ ಸಂಕಲನ ಬಿಡುಗಡೆಗೊಳಿಸಿದ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಒಂದು ವಿಷಯದ ಬಗ್ಗೆ ಕೆಲವೇ ಪದಗಳನ್ನು ಬಳಸಿ ಹನಿಗವನಗಳ ರೂಪದಲ್ಲಿ ಸೆರೆಹಿಡಿಯುವುದು ಅದ್ಭುತ ಕಲೆ. ಒಂದೆರಡು ಸಾಲಿನಲ್ಲಿ ವಿಶಾಲ ಅರ್ಥ ಕೊಡುವ ಹನಿಗವನ ಹೆಚ್ಚು ಆಹ್ಲಾದ ನೀಡುತ್ತದೆ. ಈ ನಿಟ್ಟಿನಲ್ಲಿ ಭೋಜರಾಜ ಸೊಪ್ಪಿಮಠ ತುಂಬ ಅರ್ಥಪೂರ್ಣವಾದ ಮತ್ತು ಮನಸ್ಸಿಗೆ ಕಚಗುಳಿ ಇಡಬಲ್ಲ ಹನಿಗವನ ರಚಿಸಿದ್ದಾರೆ ಎಂದರು.ಒಬ್ಬ ಕವಿಗೆ ಭಾಷಾ ಪಾಂಡಿತ್ಯವಿರಬೇಕು. ಚಮತ್ಕಾರದ ರೀತಿಯಲ್ಲಿ ಶಬ್ದಗಳನ್ನು ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಹೇಳಬೇಕಾದ ವಿಷಯವನ್ನು ಕೆಲವೇ ಪದಗಳಲ್ಲಿ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ನೇರವಾಗಿ ಹೇಳಬೇಕು. ಹಾಗಾದಾಗಲೇ ಆತನೊಬ್ಬ ಯಶಸ್ವಿ ಕವಿಯಾಗಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಭೋಜರಾಜ ಸೊಪ್ಪಿಮಠ ಸಾಹಿತ್ಯ ಓದುಗನಿಗೆ ಹತ್ತಿರವಾಗುತ್ತದೆ ಎಂದರು.ಈ ವೇಳೆ ಭೋಜರಾಜ ಸೊಪ್ಪಿಮಠ ದಂಪತಿಯನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ, ಯೋಗಾಚಾರ್ಯ ಸಂಗಮೇಶ ಕೆ. ಮೇಲ್ಮುರಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ಟರ್, ವಿವೇಕಾನಂದಗೌಡ ಇದ್ದರು.