ಬಾಬೂಜಿ ಪ್ರತಿಮೆಗೆ ಜಿಲ್ಲಾಧಿಕಾರಿ ಮಾಲಾರ್ಪಣೆ

| Published : Apr 06 2024, 12:45 AM IST

ಸಾರಾಂಶ

ಕಲಬುರಗಿ ನಗರದ ಟೌನಹಾಲ್‍ನಲ್ಲಿ ಡಾ. ಬಾಬು ಜಗಜೀವನ ರಾಂ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಪೂಜೆ ಸಲ್ಲಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಲಬುರಗಿ: ನಗರದ ಟೌನಹಾಲ್‍ನಲ್ಲಿ ಶುಕ್ರವಾರದಂದು ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತ ಮಾಜಿ ಉಪಪ್ರಧಾನಿಮಂತ್ರಿಗಳಾದ ಡಾ. ಬಾಬು ಜಗಜೀವನ ರಾಂ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಮೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾಲಾರ್ಪಣೆ ಮಾಡಿದರು.

ಜಿಲ್ಲಾಧಿಕಾರಿ ಹೊಸ ವರ್ಷದ ಬಾಬು ಜಗಜೀವನರಾಂ ರವರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರು. ಹಾಗೂ ಎಲ್ಲ ಸಮಾಜದ ಮುಖಂಡರಿಗೆ ಶುಭಾಶಯ ಕೋರಿದರು. ನಗರ ಪೊಲೀಸ ಆಯುಕ್ತ ಚೇತನ್ ಆರ್. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ, ಉಪಆಯುಕ್ತರಾದ ಮಾಧವ ಗಿತ್ತೆ, ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದ್ರ ಸಿಂಗ್ ಕೌರ್, ಸಮಾಜ ಕಲ್ಯಾಣ ಇಲಾಖೆ (ಪ್ರ) ಅಧಿಕಾರಿ ಜಾವಿದ್ ಕರಂಗಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ರಮೇಶ ವಡೇಕರ್, ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಮಟ್ಟದ ಅಧಿಕಾರಿಗಳು ಎಸ್‍ಸಿ/ಎಸ್‍ಟಿ ಸರಕಾರಿ ಅರೆ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಸೋಮಶೇಖರ ಎಸ್ ಮದನಕರ್, ಸಮಾಜ ಮುಖಂಡರಾದ ರಾಜು ವಡೇಕರ್, ಎಸ್. ಶ್ಯಾಮನಾಟೆಕರ್, ದಶರಥ ಕಲಗುರ್ತಿ, ಬಂಡೇಶ, ವಿಠ್ಠಲಗೊಳಿ ರಾಜುಕಟ್ಟಿಮನಿ ಸುನೀತ ಎಂ ಕೊಲ್ಲುರು, ಭಾರತಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.