ಡೆಂಘೀ ಹಿನ್ನೆಲೆ: ಶಾಲೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ

| Published : Jul 10 2024, 12:36 AM IST

ಡೆಂಘೀ ಹಿನ್ನೆಲೆ: ಶಾಲೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಡೆಂಘೀ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಮಕ್ಕಳ ಕುರಿತು ಮುಂಜಾಗ್ರತೆ ಅಗತ್ಯವಿದೆ, ಬೆಳಗಿನ ಹೊತ್ತು ಮಕ್ಕಳು ಶಾಲೆಯಲ್ಲೇ ಇರುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಶಾಲೆಯ ಸುತ್ತ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದ ತಾಣಗಳಿದ್ದರೆ ನಾಶಪಡಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಬಿಇಓ ಎಸ್.ಎನ್.ಕನ್ನಯ್ಯ ಕ್ಷೇತ್ರ ಸಿಬ್ಬಂದಿಗೆ ಸೂಚನೆ ನೀಡಿದರು. ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಸಭೆಯಲ್ಲಿ ಅವರು ಮಾತನಾಡಿದರು.ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ

ಡೆಂಘೀ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಮಕ್ಕಳ ಕುರಿತು ಮುಂಜಾಗ್ರತೆ ಅಗತ್ಯವಿದೆ, ಬೆಳಗಿನ ಹೊತ್ತು ಮಕ್ಕಳು ಶಾಲೆಯಲ್ಲೇ ಇರುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಶಾಲೆಯ ಸುತ್ತ ಈಡೀಸ್ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದ ತಾಣಗಳಿದ್ದರೆ ನಾಶಪಡಿಸಲು ಸೂಕ್ತ ಮಾರ್ಗದರ್ಶನ ನೀಡಡಬೇಕು. ಶಾಲೆಗಳಲ್ಲಿ ಕ್ರಿಯಾಯೋಜನೆ ತಯಾರಿ, ಮೂಲಸೌಲಭ್ಯಗಳ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗಮನಹರಿಸಿ ಎಂದರು.

ಕಲಿಕೋಪಕರಣ ಬಳಸಿಕೊಳ್ಳಿ

ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು, ಶಾಲೆಗಳಲ್ಲಿ ಕಲಿಕೋಪಕರಣಗಳ ಸಮರ್ಪಕ ಬಳಕೆ ಮೂಲಕ ಮಕ್ಕಳಿಗೆ ಬೋಧನೆ ಮಾಡಲು ಸೂಚಿಸಿ, ಕೇವಲ ತಾತ್ವಿಕ ಬೋಧನೆಗೆ ಸೀಮಿತವಾಗದೇ ಮಕ್ಕಳ ಮನಮುಟ್ಟುವಂತೆ ಕಲಿಕೋಪಕರಣಗಳ ಸದ್ಬಳಕೆ ಮಾಡಿಕೊಳ್ಳಿ, ಪ್ರಾಯೋಗಿಕ ಸಲಕರಣೆಗಳನ್ನು ಬಳಸಿಕೊಳ್ಳಲು ಸೂಚಿಸಿ ಎಂದರು.

ಶಾಲೆಗಳಲ್ಲಿ ಪರಿಸರ, ವಿಜ್ಞಾನ, ಆರೋಗ್ಯ ಕ್ಲಬ್ ಸೇರಿದಂತೆ ವಿವಿಧ ಕ್ಲಬ್‌ಗಳ ನಿರ್ವಹಣೆ, ತಂತ್ರಜ್ಞಾನ ಕಲಿಕೆಗೆ ಗಣಕ ಯಂತ್ರಗಳ ಬಳಕೆ ಶಾಲೆಯ ಭೌತಿಕ ಪರಿಸರದ ಕುರಿತು ಗಮನಹರಿಸಿ, ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.ಶಾಲೆಗಳ ಆಸ್ತಿ ದಾಖಲೆ

ಶಾಲಾ ಆಸ್ತಿ ದಾಖಲೆಗಳನ್ನು ಮಾಡಿಸಿರುವ ಕುರಿತು ಗಮನಿಸಿ, ಅನುದಾನ ದುರ್ಬಳಕೆ ಕುರಿತು ಗ್ರಾಮಸ್ಥರಿಂದ ದೂರುಗಳಿದ್ದರೆ ಪರಿಶೀಲನೆ ನಡೆಸಲು ತಿಳಿಸಿದ ಬಿಇಒ ಅವರು, ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಸಮರ್ಪಕವಾಗಿ ನಿರ್ವಹಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು. ಪರಿಸರ ಸಂರಕ್ಷಣೆಗಾಗಿ ಕೈಗೊಂಡಿರುವ ಬೀಜದುಂಡೆ ತಯಾರಿಕೆ ಹಾಗೂ ಬೀಜದುಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಹಾಕಿ ಗಿಡಗಳನ್ನು ಬೆಳೆಸುವ ಕಾರ್ಯ ಕೈಗೊಳ್ಳಲು ತಿಳಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಶ್ಮಿ, ಮಲ್ಲಿಕಾರ್ಜುನ್, ನಾಗರಾಜ್, ಶಿಕ್ಷಣ ಸಂಯೋಜಕರಾದ ಮುನಿರತ್ನಯ್ಯಶೆಟ್ಟಿ, ನಂಜುಂಡಗೌಡ, ರಾಘವೇಂದ್ರ, ಕೆ.ಶ್ರೀನಿವಾಸ್, ಬಿಆರ್‌ಸಿ ಪ್ರೋಗ್ರಾಮರ್ ಪ್ರಭಾಕರ್ ಇದ್ದರು.