ಬ್ಯಾಡಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಮೆಣಸಿನಕಾಯಿ

| Published : Dec 19 2023, 01:45 AM IST

ಸಾರಾಂಶ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರಸಕ್ತ ವರ್ಷದ ಮೆಣಸಿನಕಾಯಿ ಬೆಳೆ ಪ್ರವೇಶಿಸಿದೆ. ಆವಕದಲ್ಲಿಯೂ ಉತ್ತಮ ವೇಗವನ್ನು ಪಡೆದುಕೊಂಡಿದೆ. ಸೋಮವಾರ 50 ಸಾವಿರ ಚೀಲದ ಗಡಿ ದಾಟಿದ್ದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಉತ್ತಮ ಆರಂಭ ದೊರೆತಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರಸಕ್ತ ವರ್ಷದ ಮೆಣಸಿನಕಾಯಿ ಬೆಳೆ ಪ್ರವೇಶಿಸಿದೆ. ಆವಕದಲ್ಲಿಯೂ ಉತ್ತಮ ವೇಗವನ್ನು ಪಡೆದುಕೊಂಡಿದೆ. ಸೋಮವಾರ 50 ಸಾವಿರ ಚೀಲದ ಗಡಿ ದಾಟಿದ್ದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಉತ್ತಮ ಆರಂಭ ದೊರೆತಿದೆ.

ಮಾರುಕಟ್ಟೆಗೆ ಒಟ್ಟು 51764 ಚೀಲ ಮೆಣಸಿನಕಾಯಿ ಆವಕವಾಗಿದೆ. ಪ್ರಸಕ್ತ ಮಳೆಯ ಕೊರತೆಯಿಂದ ಮೆಣಸಿನಕಾಯಿ ಬೆಳೆಗೆ ಹಿನ್ನೆಡೆಯಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಆತಂಕದಲ್ಲಿದ್ದರು. ಆದರೆ ಕಳೆದೊಂದು ತಿಂಗಳಿಂದ ಹತ್ತಿಪ್ಪತ್ತು ಸಾವಿರ ಚೀಲದಷ್ಟಿದ್ದ ಮೆಣಸಿನಕಾಯಿ ಆವಕ ಇಂದು 50 ಸಾವಿರ ಚೀಲದ ಗಡಿ ದಾಟಿದೆ.

ಬಂಪರ್ ಬೆಲೆ: ಕಳೆದ ಹಲವು ದಶಕಗಳಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಾ ಬಂದಿದೆ. ಸೋಮವಾರ ಡಬ್ಬಿ ಹಾಗೂ ಕಡ್ಡಿ ಮೆಣಸಿನಕಾಯಿಗೆ ಮತ್ತೆ ಬಂಪರ್ ಬೆಲೆ ದೊರೆತಿದ್ದು, ₹65 ಸಾವಿರಕ್ಕೆ ಮಾರಾಟವಾಗುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿವೆ.

ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರಗಳು ಇಂತಿವೆ:

ಕಡ್ಡಿತಳಿ ಕನಿಷ್ಠ ₹3489 ಗರಿಷ್ಠ ₹65299 ಸರಾಸರಿ ₹42529

ಡಬ್ಬಿತಳಿ ಕನಿಷ್ಠ ₹3669 ಗರಿಷ್ಠ ₹65399 ಸರಾಸರಿ ₹43869

ಗುಂಟೂರು ಕನಿಷ್ಠ ₹1629 ಗರಿಷ್ಠ ₹19289 ಸರಾಸರಿ 1₹6209