25 ವರ್ಷದ ಬಳಿಕ ಬಾಲುಗೆ ಒಲಿದ ಬಿಜೆಪಿ ಟಿಕೆಟ್‌

| Published : Mar 25 2024, 12:46 AM IST

ಸಾರಾಂಶ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಬಾಲರಾಜು 1999ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಟಿಕೆಟ್ ಪಡೆದಿದ್ದನ್ನ ಬಿಟ್ಟರೆ ಪುನಃ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು 24ವರ್ಷ ಕಾಯಬೇಕಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಬಾಲರಾಜು 1999ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಟಿಕೆಟ್ ಪಡೆದಿದ್ದನ್ನ ಬಿಟ್ಟರೆ ಪುನಃ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು 24ವರ್ಷ ಕಾಯಬೇಕಾಯಿತು.

ಹೌದು ಎಸ್ ಬಾಲರಾಜು 1994ರಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆದು 24,250 ಸಾವಿರ ಮತಗಳನ್ನಷ್ಟೆ ಪಡೆದಿದ್ದರು.ಇದು ವಿಧಾನಸಭೆಗೆ ಬಾಲರಾಜು ಅವರ ಮೊದಲ ಸ್ಪರ್ಧೆ ಜೊತೆಗೆ ಅಂದು ಟಿಕೆಟ್ ದಕ್ಕಲು ರಾಜಕೀಯ ಗುರುಗಳಾದ ಕೇಂದ್ರ ಸಚಿವ ದಿ. ರಾಜಶೇಖರಮೂರ್ತಿ ಅವರ ಕೃಪ ಕಟಾಕ್ಷದಿಂದ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಒಟ್ಟಾರೆ 1999, 2004, 2008, 2009ರ ಉಪಚುನಾವಣೆ ಮತ್ತು 2013 ಹೀಗೆ ಐದು ಚುನಾವಣೆಗಳಲ್ಲಿ ಬಾಲರಾಜು ಸ್ಪರ್ಧಿಸಿದ್ದರೂ, 2004ರಲ್ಲಿ ಮಾತ್ರ ಗೆದ್ದು ಶಾಸಕರಾದದ್ದು ಬಿಟ್ಟರೆ ಇಲ್ಲಿತನಕ ಅಧಿಕಾರ ದಕ್ಕಿಲ್ಲ, 2018, 2023ರಲ್ಲಿ ಬಾಲರಾಜು ವಿಧಾನಸಭೆಗೆ ಸ್ಪರ್ಧಿಸಲಿಲ್ಲ ಎಂಬುದನ್ನ ಇಲ್ಲಿ ಸ್ಮರಿಸಬಹುದು. ಬಳಿಕ ಬಾಲರಾಜು ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಹಿನ್ನೆಲೆ 2004ರಲ್ಲಿ ಬಿಜೆಪಿಯಿಂದಲೇ ವಿಧಾನಸಭಾ ಚುನಾವಣೆ ಟಿಕೆಟ್ ನಿರೀಕ್ಷಿಸಿದ್ದರು. ಆದರೆ ಅಂದು ಜೆಡಿಎಸ್‌ ಜೊತೆಗೆ ಕೇಂದ್ರದಲ್ಲಿ ಬಿಜೆಪಿ ಮೈತ್ರಿ ಮಾತುಕತೆ ನಡೆದ ಹಿನ್ನೆಲೆ ಕೊಳ್ಳೇಗಾಲ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಜೆಪಿ ಅನಿವಾರ್ಯವಾಗಿ ಬಿಟ್ಟುಕೊಡಬೇಕಾಯಿತು. ಅಂದಿನ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ. ಬಸವಯ್ಯ ಅವರ ಪುತ್ರ ಸರ್ವೇಶ್‌ ಬಸವಯ್ಯ ಅವರಿಗೆ ಟಿಕೆಟ್ ನೀಡಲಾಯಿತು. ಈಹಿನ್ನೆಲೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಾಲರಾಜು ಅವರು ದಿಕ್ಕು ತೋಚದಂತಾಗಿದ್ದರು. ಅಭಿಮಾನಿಗಳ ಒತ್ತಾಯದಿಂದ ಸ್ಪರ್ಧೆ:

ಅಂದು ದಿಕ್ಕುತೋಚದಂತಾಗಿದ್ದ ಬಾಲರಾಜು ಅವರ ಖುದ್ದು ಮದ್ದೂರು ಮನೆಗೆ ತೆರಳಿದ ಅನೇಕ ಮುಖಂಡರು ನೀವು ಸ್ಪರ್ಧೆಗೆ ತಯಾರಾಗಿ ಎಂಬ ಸಂದೇಶ ರವಾನಿಸಿದರು. ಆದರೆ ಅಂದು ಬಾಲರಾಜು ಅವರು ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಿ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಸಭೆಯಲ್ಲಿ ಅಪಾರ ಅಭಿಮಾನಿ ಬಳಗ ನೆರೆದು ಟಿಕೆಟ್ ಕೈ ತಪ್ಪಿದ್ದಕ್ಕೆ ಅಂದು ಕಣ್ಣಿರಿಟ್ಟ ಬಾಲರಾಜು ಅವರನ್ನು ಸಂತೈಸಿ ನಿಮ್ಮ ಜೊತೆ ನಾವಿದ್ದೆವೆ ಸ್ಪರ್ಧೆಗೆ ತಯಾರಾಗಿ ಎಂಬ ಸಂದೇಶ ರವಾನಿಸಿದರು. ಈ ಹಿನ್ನೆಲೆ ಬಾಲರಾಜು ಪಕ್ಷೇತರ ಅಭ್ಯಥಿ೯ಯಾಗಿ ನಿಲ್ಲುವಂತಾಯಿತು.

ಬಾಕ್ಸ್‌.....

ಪಕ್ಷೇತರ ಅಭ್ಯರ್ಥಿಯಾಗಿ ಜಯ, ದಾಖಲೆ: ಬಳಿಕ ಬಾಲರಾಜು ಅವರಿಗೆ ಅಂದಿನ ಚುನಾವಣೆಯಲ್ಲಿ ಅಯೋಗ ಗುಡಿಸಲು ಮನೆ ಗುರುತು ನೀಡಿದ ಹಿನ್ನೆಲೆ ಬಾಲರಾಜು ಪರವಾಗಿ ಅಂದು ಅಸಂಖ್ಯಾತ ಸ್ವಯಂ ಪ್ರೇರಿತ ಅಭಿಮಾನಿ ಬಳಗ ಚುನಾವಣಾ ಪ್ರಚಾರಕ್ಕೆ ತಯಾರಾದರು, ಅದರ ಫಲ ಕಡಿಮೆ ಖರ್ಚಿನಲ್ಲಿ ಎಸ್ ಬಾಲರಾಜು ಸ್ವತಂತ್ರ ಅಭ್ಯರ್ಥಿಯಾಗಿ ಮೀಸಲು ಕ್ಷೇತ್ರದಲ್ಲೆ ಗೆದ್ದ ಪ್ರಮುಖ ಅಭ್ಯರ್ಥಿ ಎಂಬ ದಾಖಲೆ ಬರೆಯುವಂತಾಯಿತು. ಅಂದಿನ ಚುನಾವಣೆಯಲ್ಲಿ 27,736ಸಾವಿರ ಮತಗಳಿಸಿ ಸುಮಾರು 3000ಕ್ಕೂ ಅಧಿಕ ಮತಗಳ ಅಂತರದ ಗೆಲುವು ಕಂಡರು.

ಮತ್ತೆ ಗೆಲುವು ಕಾಣಲಿಲ್ಲ: 2004ರಲ್ಲಿ ಮೂರೂವರೆ ವರುಷಗಳ ಕಾಲ ಶಾಸಕರಾಗಿದ್ದ ಬಾಲರಾಜು ಅವರು ಪುನಃ ನಡೆದ 2008ರ ಚುನಾವಣೆಯಲ್ಲಿ ಯಾವ ಪಕ್ಷ ಸೇರಬೇಕೆಂಬ ಗೊಂದಲದ ನಡುವೆ ಕೊನೆಗೂ ಪುನಃ ಪಕ್ಷೇತರವಾಗಿ ಸ್ಪರ್ಧಿಸಿದರು. ಆದರೆ ಮೊದಲ ಗೆಲುವಿನಷ್ಟು ಜನ ಅಭಿಮಾನಿಗಳ ಬೆಂಬಲ ದೊರೆಯದ ಕಾರಣ ಅಂದಿನ ಚುನಾವಣೆಯಲ್ಲಿ ಕೇವಲ 11,805 ಮತಗಳಿಸಲಷ್ಟೆ ಸಾಧ್ಯವಾಗಿ 5ನೇ ಸ್ಥಾನಕ್ಕೆ ತೖಪ್ತಿಪಟ್ಟುಕೊಳ್ಳುವಂತಾಯಿತು. 2009ರ ಉಪಚುನಾವಣೆಯಲ್ಲಿಯೂ ಸಹಾ ಬಾಲರಾಜು ಅವರು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಾಲರಾಜು ಆ ಚುನಾವಣೆಯಲ್ಲಿಯೂ 16,572ಮತ ಗಳಿಸಲು ಸಫಲರಾಗಿ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. 2013ರ ಚುನಾವಣೆಯಲ್ಲಿ ಬಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರ ಸ್ಥಾಪಿಸಿದ್ದ ಕೆಜೆಪಿಗೆ ಎ.ಆರ್. ಕೃಷ್ಣಮೂರ್ತಿ ಸೇರದೆ ಕೊನೆ ಕ್ಷಣದಲ್ಲಿ ಕೈಕೊಟ್ಟ ಹಿನ್ನೆಲೆ ಬಾಲರಾಜು ಅವರಿಗೆ ಕೆಜೆಪಿ ಟಿಕೆಟ್ ಒಲಿಯಿತು.

ಈ ಹಿನ್ನೆಲೆ ಅಂದಿನ ಚುನಾವಣೆಯಲ್ಲಿ ಬಾಲರಾಜು ಅವರು 32,929 ಸಾವಿರ ಮತಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. 2018ರಲ್ಲಿ ಸ್ಪರ್ಧಿಸಲಿಲ್ಲ, 2023ರಲ್ಲಿ ಟಿಕೆಟ್ ಸಿಗಲಿಲ್ಲ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿ ಸೇರಿದ ಬಾಲರಾಜು ಈಗ ಅಂದರೆ 25 ವರ್ಷಗಳ ಬಳಿಕ ಬಿಜೆಪಿಯಿಂದಲೇ ಲೋಕಸಭೆಗೆ ಟಿಕೆಟ್‌ ಗಿಟ್ಟಿಸಿದ್ದಾರೆ. ಜೊತೆಗೆ ಇದೆ ಕೊನೆ ಚುನಾವಣೆ ಎಂದು ಘೋಷಿಸಿರುವುದು ಸಹಾ ಈಗ ನಾನಾ ಚಚೆ೯ಗೆ ಆಸ್ಪದ ಮಾಡಿಕೊಟ್ಟಿದ್ದು ಲೋಕಸಭೆ ಚುನಾವಣೆಯಲ್ಲಿ ಜನ ಬೆಂಬಲ ದೊರೆಯುವುದೆ ಕಾಯಬೇಕಿದೆ.