ಬಣಜವಾಡ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ರ್‍ಯಾಂಕ್‌ಗಳು

| Published : Apr 11 2024, 12:51 AM IST

ಬಣಜವಾಡ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ರ್‍ಯಾಂಕ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಬಣಜವಾಡ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ರ್‍ಯಾಂಕ್‌ ಗಳಿಸಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ಮಹಾವಿದ್ಯಾಲಯದ ಫಲಿತಾಂಶ ಶೇ.100 ಆಗಿದ್ದು, ಪ್ರಥಮ ಶ್ರೇಣಿಯಲ್ಲಿ 82, ಡಿಸ್ಟಿಂಕ್ಷನ್ 255, ಶೇ.90ಕ್ಕಿಂತ ಅಧಿಕ 105 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ ಇಲ್ಲಿನ ಬಣಜವಾಡ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ರ್‍ಯಾಂಕ್‌ ಗಳಿಸಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ಮಹಾವಿದ್ಯಾಲಯದ ಫಲಿತಾಂಶ ಶೇ.100 ಆಗಿದ್ದು, ಪ್ರಥಮ ಶ್ರೇಣಿಯಲ್ಲಿ 82, ಡಿಸ್ಟಿಂಕ್ಷನ್ 255, ಶೇ.90ಕ್ಕಿಂತ ಅಧಿಕ 105 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗ:

ಗೌರಿ ಸೂರ್ಯವಂಶಿ (ಶೇ.99.33) ರಾಜ್ಯಕ್ಕೆ 3ನೇ ರ್‍ಯಾಂಕ್, ಸೌಂದರ್ಯ ನಾಯಿಕ (ಶೇ.98.67) ರಾಜ್ಯಕ್ಕೆ 7ನೇ ರ್‍ಯಾಂಕ್ , ಮನಸಿ ಪಾಟೀಲ (ಶೇ.98.50) 8ನೇ ರ್‍ಯಾಂಕ್ , ತನುಜಾ ಪಾಟೀಲ ಮತ್ತು ಧನಶ್ರೀ ಹಜಾರೆ (ಶೇ.98.17) 10ನೇ ರ್‍ಯಾಂಕ್ ಪಡೆದ್ದಾರೆ.

ವಾಣಿಜ್ಯ ವಿಭಾಗ:

ದಿವ್ಯಾ ಜಿ.ಕೆ. (ಶೇ.99) ರಾಜ್ಯಕ್ಕೆ 3ನೇ ರ್‍ಯಾಕ್, ವಿವೇಕ ಹೊನ್ನಳ್ಳಿ (ಶೇ.96.83), ನಿರ್ಜರಾ ಪಾಟೀಲ (ಶೇ.96.67), ಸೃಷ್ಟಿ ಸನಾಳ (ಶೇ.96.33) ಮತ್ತು ಮಧು ಹಿರೇಮಠ (ಶೇ.96.17) ಜಿಲ್ಲಾಮಟ್ಟದ ರ್‍ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಬಣಜವಾಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಬಣಜವಾಡ ಹಾಗೂ ಕಾರ್ಯದರ್ಶಿ ಅನಿತಾ ಬಣಜವಾಡ ಅಭಿನಂದಿಸಿದ್ದಾರೆ. ಅಥಣಿ ಶಿವಯೋಗಿಗಳ ನಾಡಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಬಣಜವಾಡ ಪದವಿ ಪೂರ್ವ ಮಹಾವಿದ್ಯಾಲಯದ ಫಲಿತಾಂಶ ಕಳೆದ 5 ವರ್ಷಗಳಿಂದ ಶೇ.100ಕ್ಕೆ 100 ರಷ್ಟಾಗುತ್ತಿದೆ. ಈ ವರ್ಷ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿಯರು ರಾಜ್ಯಮಟ್ಟದ 3ನೇ ರ್‍ಯಾಂಕ್ ಪಡೆದಿರುವುದು ಹರ್ಷ ತಂದಿದೆ. ಅವರಿಗೆ ಮಾರ್ಗದರ್ಶನ ಮಾಡಿದ ಎಲ್ಲ ಉಪನ್ಯಾಸಕರಿಗೆ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಅಭಿನಂದಿಸುವೆ.

-ಅನಿತಾ ಲಕ್ಷ್ಮಣ ಬಣಜವಾಡ,

ಮಹಾವಿದ್ಯಾಲಯದ ಕಾರ್ಯಾಧ್ಯಕ್ಷೆ.