ಸಾರಾಂಶ
ದೊಡ್ಡಬಳ್ಳಾಪುರ: ಹಸು ಕಟ್ಟುವ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಎರಡು ಹಸು ಸೇರಿ ರೈತ ಕೂಡ ಗಾಯಗೊಂಡಿರುವ ಘಟನೆ ತಾಲೂಕಿನ ಹಾಡೋನಹಳ್ಳಿಯಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ: ಹಸು ಕಟ್ಟುವ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಎರಡು ಹಸು ಸೇರಿ ರೈತ ಕೂಡ ಗಾಯಗೊಂಡಿರುವ ಘಟನೆ ತಾಲೂಕಿನ ಹಾಡೋನಹಳ್ಳಿಯಲ್ಲಿ ಸಂಭವಿಸಿದೆ. ಹಾಡೋನಹಳ್ಳಿ ಗ್ರಾಮದ ರೈತ ರಾಜಣ್ಣ ಎನ್ನುವವರು ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ ಮಲಗಿದ್ದಾರೆ. ಗುರುವಾರ ರಾತ್ರಿ ಒಂದು ಗಂಟೆ ಸಮಯದಲ್ಲಿ ಕಿಡಿಗೇಡಿಗಳು ಕೊಟ್ಟಿಗೆಗೆ ಅಳವಡಿಸಿದ್ದ ಹುಲ್ಲಿಗೆ ಬೆಂಕಿಯನ್ನಿಟ್ಟಿದ್ದಾರೆ. ಇದನ್ನು ಕಂಡ ಸ್ಥಳೀಯರು ರಾಜಣ್ಣನಿಗೆ ತಿಳಿಸಿದ್ದು, ಘಟನೆಯಲ್ಲಿ ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ಹಸುವನ್ನು ಕಾಪಾಡಲು ಮುಂದಾದ ರಾಜಣ್ಣ ಹಾಗೂ ಆತನ ಮಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.