ಸಾರಾಂಶ
ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮುನ್ನ, ರೈಲಿನೊಳಗೆ ಪ್ರವೇಶಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.
ಬೆಂಗಳೂರು : ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮುನ್ನ, ರೈಲಿನೊಳಗೆ ಪ್ರವೇಶಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.
ಹೂವುಗಳು, ಬಣ್ಣ ಬಣ್ಣದ ಬಲೂನುಗಳಿಂದ ಶೃಂಗಾರಗೊಂಡಿದ್ದ ರೈಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು, ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಂತೆ ಪುಳಕಿತಗೊಂಡರು. ಕೆಲವು ವಿದ್ಯಾರ್ಥಿಗಳಿಗೆ ಎಷ್ಟನೇ ತರಗತಿ ಓದುತ್ತೀರಿ, ಯಾವ ಸಬ್ಜೆಕ್ಟ್ ಇಷ್ಟ ಎಂದೆಲ್ಲಾ ಪ್ರಶ್ನಿಸಿದರು. ಕೇಂದ್ರಿಯ ವಿದ್ಯಾಲಯ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಂದೇ ಭಾರತ್ ರೈಲಿನಲ್ಲಿ ಸಂಚರಿಸುವ ಅವಕಾಶ ದೊರಕಿತ್ತು. ನಗರ ರೈಲು ನಿಲ್ದಾಣದಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ವಿದ್ಯಾರ್ಥಿಗಳು ಉದ್ಘಾಟನಾ ರೈಲಿನಲ್ಲಿ ವಿದ್ಯಾರ್ಥಿಗಳು ಪ್ರಯಾಣ ಮಾಡಿದರು.
ವಿದ್ಯಾರ್ಥಿಗಳ ಜತೆ ಹಾಸ್ಯ: ಇನ್ನು ಮೆಟ್ರೋ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ ಬಳಿಕ ಪ್ರಧಾನಿ ಮೋದಿ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆಗೆ ಕೆಲ ದೂರ ಪ್ರಯಾಣಿಸಿದರು. ಈ ವೇಳೆ ಅವರು ಯಾಕೆ ಹೀಗಿದ್ದೀಯಾ? ಸರಿಯಾಗಿ ಊಟ ಮಾಡಲ್ವಾ? ಬೋರಿಂಗ್ ಸಬ್ಜಕ್ಟ್ ಇದ್ದಾಗ ನಾನೂ ಕ್ಲಾಸಲ್ಲೇ ನಿದ್ದೆ ಮಾಡಿಬಿಟ್ಟಿದ್ದೆ ಎಂದು ವಿದ್ಯಾರ್ಥಿಗಳ ಜತೆ ಹಾಸ್ಯಚಟಾಕಿ ಹಾರಿಸಿದರು ಎಂದು ಹೇಳಿಕೊಂಡು ವಿದ್ಯಾರ್ಥಿಗಳು ಸಂಭ್ರಮಿಸಿದರು.
ಇದೇ ವೇಳೆ ಸರಿಯಾದ ಸಮಯಕ್ಕೆ ನಿದ್ದೆ ಮಾಡಿ ಮೋದಿ ಸಲಹೆ ನೀಡಿದರು. ಅಷ್ಟೇ ಅಲ್ಲದೆ, ತಮ್ಮ ಇಷ್ಟದ ಹಾಗೂ ಬೋರಿಂಗ್ ಸಬ್ಜೆಕ್ಟ್ ಬಗ್ಗೆ ಕೂಡ ಪ್ರಧಾನಿ ಮಾತಾಡಿದರು. ರೈಲಿನಲ್ಲಿದ್ದ ಒಬ್ಬ ವಿದ್ಯಾರ್ಥಿನಿಗೆ ನೀನು ಯಾಕೆ ಊಟ ಮಾಡಲ್ವಾ ಎಂದು ಕೇಳಿದರು. ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಎಂದು ಸಲಹೆ ನೀಡಿದರು ಎಂದು ವಿದ್ಯಾರ್ಥಿಗಳು ತಿಳಿಸಿದರು.
ರಾಜ್ಯದಲ್ಲಿ ಸಾಂಸ್ಕೃತಿಕ ಪರಂಪರೆ
ಜತೆ ತಂತ್ರಜ್ಞಾನ ಸಮನ್ವಯ: ಸಚಿವ
‘ಅಭಿವೃದ್ಧಿ ಮುಂಚೂಣಿಯಲ್ಲಿರುವ ಕರ್ನಾಟಕ ಎಂದಿಗೂ ಮುಂದಿದ್ದು, ತನ್ನ ಪಾರಂಪರಿಕ, ಸಾಂಸ್ಕೃತಿಕ ಸಾಹಿತ್ಯದ ಶ್ರೀಮಂತಿಕೆ ಜೊತೆಗೆ ಐಟಿಬಿಟಿ, ಎಐ ರೀತಿಯ ಆಧುನಿಕ ತಂತ್ರಜ್ಞಾನದ ಜೊತೆ ಸಮನ್ವಯ ಸಾಧಿಸಿದೆ’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಐಐಐಟಿಯಲ್ಲಿ ಭಾನುವಾರ ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದರು. ‘ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಡೀ ಹೊಸ ಜಗತ್ತನ್ನು ಭಾರತ ನಿರ್ಭೀತವಾಗಿ ಮುನ್ನಡೆಸಲು ನಿಂತಿದೆ. ಪ್ರಧಾನಿ ಮೋದಿ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ತತ್ವದ ಪ್ರತಿರೂಪ. ಕಾಯಕವೇ ಕೈಲಾಸ ಎಂಬುದು ಅವರ ಜೀವನದಲ್ಲಿ ಹಾಸುಹೊಕ್ಕಾದ ಮಂತ್ರ ಮಾತ್ರವಲ್ಲ, ಅದು ಆಡಳಿತ ಸೂತ್ರವೂ ಹೌದು‘ ಎಂದು ಬಣ್ಣಿಸಿದರು.
‘ವಿಕಸಿತ ಭಾರತದ ಧ್ಯೇಯ ಹೊತ್ತಿರುವ ಅವರು ವೈಯಕ್ತಿಕ ಆಸೆ ಆಕಾಂಕ್ಷೆ ಇಟ್ಟುಕೊಂಡಿಲ್ಲ. ರಾಷ್ಟ್ರಕ್ಕಾಗಿ ಜೀವನ ಸಮರ್ಪಿಸಿಕೊಂಡ ಅವರು ರಾಷ್ಟ್ರಹಿತ, ಸಮಾಜದ ಹಿತವನ್ನು ತಪಸ್ಸಿನಂತೆ ಅಚರಿಸುವ ಅವರು ಆಧುನಿಕ ಭಾರತದ ಕರ್ಮಯೋಗಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ಸೌಭಾಗ್ಯದ ವಿಚಾರ’ ಎಂದರು.
‘ವಿಕಸಿತ ಭಾರತದ ಸಂಕಲ್ಪದ ಹೊಣೆ ಹೊತ್ತಿರುವ ಮೋದಿ ಅವರ ನಾಯಕತ್ವದಲ್ಲಿ ಭಾರತ ಯಾರ ಎದುರು ತಲೆ ಬಾಗುವುದಿಲ್ಲ. ಭಯೋತ್ಪಾದನೆ ಹತ್ತಿಕ್ಕಲು ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್, ಈಚೆಗಿನ ಆಪರೇಷನ್ ಸಿಂದೂರ, ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆದುಹಾಕಿರುವುದು ಅವರ ದಿಟ್ಟ ನಿರ್ಧಾರದ ಪ್ರತೀಕ’ ಎಂದು ಹೇಳಿದರು.