ಕ್ರಿಸ್ಮಸ್ ಸಡಗರಕ್ಕೆ ಸಿಲಿಕಾನ್ ಸಿಟಿ ಸಜ್ಜುಕ್ರಿಸ್ಮಸ್ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ನಗರದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಾಗಿ ಸಿಂಗಾರಗೊಳ್ಳುತ್ತಿವೆ. ಶಿವಾಜಿನಗರ ಸೇರಿ ವಿವಿಧೆಡೆ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್ ಉಡುಗೊರೆ, ಅಲಂಕಾರಿಕ ಪರಿಕರ ಖರೀದಿ ಜೋರಾಗಿದೆ. ಬೇಕರಿ, ಹೋಟೆಲ್‌ಗಳು ಕೇಕ್, ಚಾಕಲೇಟ್ ಸೇರಿ ವೈವಿಧ್ಯಮಯ ಖಾದ್ಯಗಳ ತಯಾರಿಕೆಗೆ ಅಡಿಯಿಟ್ಟಿವೆ.