ಒಳಮೀಸಲಾತಿ, ಜಾತಿ ಗಣತಿ ಜಾರಿಗೆ ಎಐಬಿಎಸ್ಪಿ ಒತ್ತಾಯಕಾಂತರಾಜ್ ಆಯೋಗದ ವರದಿಯನ್ನು ಮುಂದಿನ 15 ದಿನಗಳೊಳಗೆ ಜಾರಿ ಮಾಡದಿದ್ದರೆ, ಎಲ್ಲಾ ಸಚಿವರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಘೇರಾವ್ ಮಾಡುವುದಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು. ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.