ಅರಣ್ಯ ಭೂಮಿ ಹೆಸರಲ್ಲಿ ರೈತರ ಒಕ್ಕಲೆಬ್ಬಿಸಿದರೆ ಹೋರಾಟದೊಡ್ಡಬಳ್ಳಾಪುರ: ರಾಜ್ಯದಲ್ಲಿ ಲಕ್ಷಾಂತರ ಜನರು ಸರ್ಕಾರಿ ಜಾಗಗಳಲ್ಲಿ ಮನೆ, ಗುಡಿಸಲು ಕಟ್ಟಿಕೊಂಡಿದ್ದು ಅಂತಹ ಜನತೆಗೆ ಸರ್ಕಾರದಿಂದ ಯಾವುದೇ ಹಕ್ಕು ಪತ್ರಗಳಾಗಲಿ, ಮಂಜೂರಾತಿ ಆಗಲಿ ನೀಡಿರುವುದಿಲ್ಲ. ಅಂತಹ ಜನರ ಹೋರಾಟವನ್ನು ಬೆಂಬಲಿಸುವುದು ಅಗತ್ಯವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಮಿತಿ ಮುಖಂಡ ಸಿರಿಮನೆ ನಾಗರಾಜು ತಿಳಿಸಿದರು.