ಷಟ್ಸ್ಥಲ ಸಿದ್ಧಾಂತಕ್ಕೆ ತಳಹದಿ ಹಾಕಿದವರು ಚನ್ನಬಸವಣ್ಣವಿಜಯಪುರ: ಭಕ್ತಿಗೆ ಬಸವಣ್ಣ ಜ್ಞಾನಕ್ಕೆ ಅಲ್ಲಮಪ್ರಭು ಇದ್ದಂತೆ ಶೈವಾಚಾರ ನಿರೂಪಣೆಗೆ ಹೆಸರಾದ ಚನ್ನಬಸವಣ್ಣ, ಷಟ್ಸ್ಥಲ ಸಿದ್ಧಾಂತಕ್ಕೆ ಸೂಕ್ತ ತಳಹದಿ ಹಾಕಿ ಸೃಷ್ಟಿಶಾಸ್ತ್ರ ಮತ್ತು ಮನಃಶಾಸ್ತ್ರಗಳನ್ನು ಬಹುವಿಸ್ತಾರವಾಗಿ ವರ್ಣಿಸಿದ್ದಾರೆ. ಅವರ ವಚನಗಳಲ್ಲಿ ಆತ್ಮಪ್ರತ್ಯಯ, ಸ್ಪಷ್ಟೋಕ್ತಿಗಳಿದ್ದು ಪ್ರಶಂಸಾರ್ಹವಾದವು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.