₹340 ಕೋಟಿ ಕೋವಿಡ್ ವೆಚ್ಚಕ್ಕೆ ದಾಖಲೆಗಳೇ ಇಲ್ಲ!ಬಿಜೆಪಿ ಅವಧಿಯಲ್ಲಿನ ಕೋವಿಡ್ ಅಕ್ರಮದ ಕುರಿತಂತೆ ನ್ಯಾ. ಮೈಕಲ್ ಡಿ.ಕುನ್ಹಾ ತನಿಖಾ ಆಯೋಗ ನೀಡಿರುವ ವರದಿಯ ಮತ್ತಷ್ಟು ಅಂಶಗಳು ಬಹಿರಂಗಗೊಂಡಿದ್ದು, ಕೋವಿಡ್ ನಿಯಂತ್ರಣಕ್ಕೆ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸರ್ಕಾರ ನೀಡಿದ್ದ ಅನುದಾನದಲ್ಲಿ 340 ಕೋಟಿ ರು. ವೆಚ್ಚದ ದಾಖಲೆಗಳನ್ನೇ ಮಂಗಮಾಯ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ.