ದಾನಾಪುರ–ಯಶವಂತಪುರ ಮಧ್ಯೆ ವಿಶೇಷ ರೈಲು ಓಡಾಟ

| N/A | Published : Oct 08 2025, 07:18 AM IST

Dirtiest train

ಸಾರಾಂಶ

ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ.

ಬೆಂಗಳೂರು: ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ.

ದಾನಾಪುರ - ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು (03261) ಅಕ್ಟೋಬರ್ 11 ರಿಂದ ಡಿಸೆಂಬರ್ 27, 2025 ರವರೆಗೆ ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಗೆ ದಾನಾಪುರದಿಂದ ಹೊರಡುತ್ತದೆ ಮತ್ತು ಮಂಗಳವಾರ ರಾತ್ರಿ 9.30 ಗಂಟೆಗೆ ಯಶವಂತಪುರ ತಲುಪುತ್ತದೆ.

ಮರಳಿ ಬರುವಾಗ, ಈ ರೈಲು (03262) ಅಕ್ಟೋಬರ್ 14 ರಿಂದ ಡಿಸೆಂಬರ್ 30 ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ ಮತ್ತು ಗುರುವಾರ ಮಧ್ಯಾಹ್ನ 12 ಗಂಟೆಗೆ ದಾನಾಪುರ ತಲುಪುತ್ತದೆ. ಈ ರೈಲು ಪ್ರತಿ ದಿಕ್ಕಿನಲ್ಲಿಯೂ ಒಟ್ಟು ಹನ್ನೆರಡು ಟ್ರಿಪ್‌ಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

Read more Articles on