ಸಾರಾಂಶ
ಬೈಕ್ ಚಾಲನೆ ಮಾಡುತ್ತಿದ್ದ ತೇಜಸ್ (20) ಅವರ ತಲೆ, ಬೆನ್ನಿಗೆ ತೀವ್ರ ಗಾಯಗಳಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮದ್ದೂರು: ಗಣೇಶ ಪ್ರತಿಷ್ಠಾಪನೆಗೆ ಸಾಮಗ್ರಿ ತರಲು ತೆರಳುತ್ತಿದ್ದ ಬೈಕ್ ಎತ್ತಿನಗಾಡಿ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಬೋರಾಪುರ ಗ್ರಾಮದಲ್ಲಿ ಜರುಗಿದೆ. ಘಟನೆಯಲ್ಲಿ ಸುಹಾಸ್ (19) ಮೃತಪಟ್ಟವರು. ಬುಧವಾರ ಬೆಳಗ್ಗೆ ಗ್ರಾಮದಿಂದ ಮದ್ದೂರಿಗೆ ಪೂಜಾ ಸಾಮಗ್ರಿ ತರಲು ತೆರಳುವ ವೇಳೆ ಗ್ರಾಮ ಪರಿಮಿತಿಯಲ್ಲಿ ನಿಂತಿದ್ದ ಎತ್ತಿನಗಾಡಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ಸುಹಾಸ್ ಗೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ತೇಜಸ್ (20) ಅವರ ತಲೆ, ಬೆನ್ನಿಗೆ ತೀವ್ರ ಗಾಯಗಳಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.