ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ: ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿತ ದಲಿತ ಚಳುವಳಿ ಹೋರಾಟಕ್ಕೆ 50ವರ್ಷ ಪೂರೈಸಿದ ಹಿನ್ನೆಲೆ 7ರಂದು ಬೆಂಗಳೂರಿನ ಡಾ: ಅಂಬೇಡ್ಕರ್ ಭವನದಲ್ಲಿ 50 ವರ್ಷಗಳ ಸಂಭ್ರಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲೂಕು ಅಧ್ಯಕ್ಷ ಕಾಸಿಮಪ್ಪ ಡಿ. ಮುರಾರಿ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ಸರ್ಕಾರ ಆಂಧ್ರ ಮತ್ತು ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. ಇನ್ನಿತರ 11 ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಒತ್ತಾಯಿಸಲಾಗುವುದು, ಸಮಾರಂಭಕ್ಕೆ ಸಿಎಂ ಸೇರಿ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಮಸ್ಕಿ ತಾಲೂಕಿನಿಂದ 200ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಲಿದ್ದಾರೆ ಎಂದರು.
ಒಳಮೀಸಲಾತಿ ತೀರ್ಪು ಸ್ವಾಗತಾರ್ಹ: ಕಳೆದ ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇದೀಗ ನಮ್ಮ ನ್ಯಾಯಯುತ ಬೇಡಿಕೆಗೆ ಜಯ ಸಿಕ್ಕಿದ್ದು ಒಳ ಮೀಸಲಾತಿ ತೀರ್ಪು ಸ್ವಾಗತಾರ್ಹವಾಗಿದ್ದು, ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಸಮಿತಿಯ ರಮೇಶ್ ಬೆಳ್ಳಿಗನೂರು, ರಡ್ದೆಪ್ಪ, ಮೋಹನ್ ಎಂ. ಮುರಾರಿ, ಡ್ಯಾಮಣ್ಣ ಸಂತೆಕಲ್ಲೂರು ಇದ್ದರು.
-----