ಮೂಲಸೌಕರ್ಯ ಒದಗಿಸುವಲ್ಲಿ ಚಾಮರಾಜನಗರ ನಗರಸಭೆ ನಿರ್ಲಕ್ಷ್ಯ: ಸದಸ್ಯರ ಆರೋಪ

| Published : Dec 01 2024, 01:32 AM IST

ಮೂಲಸೌಕರ್ಯ ಒದಗಿಸುವಲ್ಲಿ ಚಾಮರಾಜನಗರ ನಗರಸಭೆ ನಿರ್ಲಕ್ಷ್ಯ: ಸದಸ್ಯರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾನಗರದ ನಗರಸಭೆ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ಸ್ವಚ್ಛತೆಯೇ ಇಲ್ಲ. ಕಸವಿಲೇವಾರಿ ಆಗುತ್ತಿಲ್ಲ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಚರಂಡಿಗಳೆಲ್ಲಾ ಹೂಳು ತುಂಬಿ ನಾರುತ್ತಿವೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮ ಮಾತಿಗೆ ನಗರಸಭೆಯಲ್ಲಿ ಬೆಲೆ ಇಲ್ಲ ಎಂದು ಆರೋಪಿಸಿ, ಸದಸ್ಯರು ಆಡಳಿತದ ವಿರುದ್ಧ ಮುಗಿ ಬಿದ್ದರು.

ಮಧ್ಯವರ್ತಿಗಳ ಕೆಲಸ ಮಾತ್ರ ಸಲೀಸು । ಸ್ವಚ್ಛತೆ, ಕಸ ವಿಲೇವಾರಿ ಸಮಸ್ಯೆಗಿಲ್ಲ ಪರಿಹಾರಕನ್ನಡಪ್ರಭ ವಾರ್ತೆ ಚಾಮರಾಜನಗರ

ಇಲ್ಲಿನ ನಗರಸಭೆ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ಸ್ವಚ್ಛತೆಯೇ ಇಲ್ಲ. ಕಸವಿಲೇವಾರಿ ಆಗುತ್ತಿಲ್ಲ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಚರಂಡಿಗಳೆಲ್ಲಾ ಹೂಳು ತುಂಬಿ ನಾರುತ್ತಿವೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮ ಮಾತಿಗೆ ನಗರಸಭೆಯಲ್ಲಿ ಬೆಲೆ ಇಲ್ಲ ಎಂದು ಆರೋಪಿಸಿ, ಸದಸ್ಯರು ಆಡಳಿತದ ವಿರುದ್ಧ ಮುಗಿ ಬಿದ್ದರು.ನಗರದ ನಗರಸಭಾ ಸಭಾಂಗಣದಲ್ಲಿ ಶನಿವಾರ ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ಒಕ್ಕೊಲರಿನಿಂದ ಎಲ್ಲಾ ಸದಸ್ಯರು ನಗರಸಭೆ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಮುಗಿಬಿದ್ದರು. ನಮ್ಮ ಯಾವ ಮನವಿ ಹಾಗೂ ದೂರಿಗೂ ಬೆಲೆ ಇಲ್ಲ, ಇಲ್ಲಿನ ಆರೋಗ್ಯಾಧಿಕಾರಿಗಳು ಕೆಲ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ೨ ರಿಂದ ೩ ತಿಂಗಳಾದರೂ ಕಸ ವಿಲೇವಾರಿಯಾಗಿಲ್ಲ ಚರಂಡಿಗಳು ಸ್ವಚ್ಛವಾಗಿಲ್ಲ, ಕುಡಿಯುವ ನೀರಂತೂ ೨೦ ದಿನವಾದರೂ ಬರುವುದಿಲ್ಲ ಎಂದು ದೂರಿದರು.ಇದಕ್ಕೆ ಸಂಬಂಧಪಟ್ಟವರನ್ನು ಕೇಳಿದರೆ, ಕಾರ್ಮಿಕರಿಲ್ಲ, ಕಸ ವಿಲೇವಾರಿ ವಾಹನಗಳಿಲ್ಲ, ಪಂಪ್‌ಹೌಸ್‌ನಲ್ಲಿ ರಿಪೇರಿ ಎಂಬ ಉದಾಸೀನ ಉತ್ತರ ಕೊಡುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಈಗಲೇ ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಸಷ್ಟನೆ ನೀಡಬೇಕು ಇಲ್ಲದಿದ್ದರೆ ಈ ಸಭೆಯನ್ನು ಮುಂದೂಡಿ ಎಂದು ಸದಸ್ಯರು ಆಗ್ರಹಿಸಿದರು.ನಗರಸಭೆಯಲ್ಲಿ ಸದಸ್ಯರ ಮಾತಿಗೆ ಕಿಂಚಿತ್ತು ಬೆಲೆಯಲ್ಲಿ ನಾವು ಕೊಟ್ಟ ಅರ್ಜಿಗಳಿಗೆ ಯಾವುದೇ ಉತ್ತರ ಇಲ್ಲ, ಇಲ್ಲಿ ಅಧಿಕಾರಿಗಳದ್ಧೇ ದರ್ಬಾರು, ಮಧ್ಯವರ್ತಿಗಳ ಕೆಲಸಗಳು ಮಾತ್ರ ಆಗುತ್ತವೆ ಎಂದು ದೂರಿದರು.

ಸೋಮವಾರದಿಂದ ಪ್ರತಿ ವಾರ್ಡಿಗೂ ಭೇಟಿ ನೀಡಿ, ಸದಸ್ಯರ ಜೊತೆಗೂಡಿ, ಸಮಸ್ಯೆಗಳನ್ನು ಆಲಿಸಲಾಗುವುದು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು, ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು, ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಅಥವಾ ವಿಶೇಷ ಸಭೆಗಳನ್ನು ಕರೆದು ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.ಆದಾಯದ ಮೂಲ ಹೆಚ್ಚಬೇಕಾದರೆ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸಲೀಸಾಗಿ ಆಗಬೇಕು, ನಗರಸಭೆಗೆ ಸೇರಿದ ಆಸ್ತಿಪಾಸ್ತಿಗಳು ಮತ್ತು ಸರ್ಕಾರಿ ಗೃಹಗಳಿಂದ ಕರ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.ನಗರದ ಪ್ರಮುಖ ರಸ್ತೆಗಳಾದ ಜೋಡಿ ರಸ್ತೆ, ಡಿವಿಯೇಷನ್ ರಸ್ತೆಗಳಲ್ಲಿ ಬಹುದಿನಗಳಿಂದವ ನೀರಿನ ಪೈಪ್ ಹೊಡೆದು ನೀರೆಲ್ಲಾ ಸೋರಿಕೆಯಾಗುತ್ತದೆ, ಇದರ ಬಗ್ಗೆ ತಕ್ಷಣ ಕ್ರಮಕೈಗೊಳ್ಳಿ, ಪುಟ್ಟಮ್ಮಣ್ಣಿ ಉದ್ಯಾನವನ ಸೇರಿದಂತೆ ಇರುವ ನಾಲ್ಕಾರು ಉದ್ಯಾನವನಗಳನ್ನು ಅಭಿವೃದ್ದಿಪಡಿಸಿ ಎಂದು ಆಗ್ರಹಿಸಿದರು.ಸಭೆಯಲ್ಲಿ ಕೈಗೊಂಡ ನಿರ್ಣಯ ಕೈಗೊಂಡ ಸರಿಯಾಗಿ ಜಾರಿಯಾಗುತ್ತಿಲ್ಲ, ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ, ಇಲ್ಲದಿದ್ದರೆ ಆಗುವ ಆನಾಹುತಗಳಿಗೆ ನಗರಸಭೆಯೇ ಹೊಣೆಯಾಗಬೇಕಾಗುತ್ತದೆ , ನಗರಸಭೆಯ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿರುವ ಕಾರಣದಿಂದ ಇಲ್ಲಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಹಣಉಳ್ಳವರಿಗೆ ಕೆಲಸ ಆಗುತ್ತದೆ. ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.ನಾವು ಇಲ್ಲಿ ಚರ್ಚೆ ಮಾಡಿದ ವಿಷಯಗಳನ್ನು ರೆಕಾರ್ಡು ಮಾಡಿ, ರಸ್ತೆ ಅಗಲೀಕರಣ ಸಮಯದಲ್ಲಿ ಮನೆ ಕಳೆದುಕೊಂಡವರಿಗೆ ತಕ್ಷಣ ನಿವೇಶನ ಹಾಗು ಪರಿಹಾರ, ಕೆಲವರು ನಿವೇಶನ, ಮನೆ ಇದ್ದರೂ ನಿವೇಶನ ಪಡೆದಿದ್ದಾರೆ ಅಂತಹವರನ್ನು ಪರಿಶೀಲಿಸಿ ತೆಗೆಹಾಕಿ, ಮನೆ ಇಲ್ಲದ ಬಡವರಿಗೆ ನೀಡಿ ಎಂದರು.ಮುಂದಿನ ದಿನಗಳಲ್ಲಿ ಇವುಗಳೆಲ್ಲಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಹಿಂದಿನ ಸಭೆಗಳಲ್ಲಿ ನಡೆದ ಆಯ-ವ್ಯಯ ಸಭೆಯ ನಡಾವಳಿಗಳು ಹಾಗೂ ವಿಶೇಷ ಸಭೆಯ ನಡಾವಳಿಗಳನ್ನು ಓದಿ ಒಪ್ಪಿಗೆ ಪಡೆದು ರೆಕಾರ್ಡು ಮಾಡಲಾಯಿತು. ಫೆ. ೨೦೨೪ ರಿಂದ ಸೆ. ೨೦೨೪ರ ವರೆಗಿನ ಮಾಹೆಗಳ ಜಮಾ ಖರ್ಚುಗಳನ್ನು ಓದಿ ಒಪ್ಪಿಗೆ ಪಡೆದು ರೆಕಾರ್ಡು ಮಾಡಲಾಯಿತು.ಸದಸ್ಯರಾದ ಮಹೇಶ್, ಸುದರ್ಶನಗೌಡ, ಬಸವಣ್ಣ, ಅಬ್ರಹಾರ್ ಅಹಮ್ಮದ್, ಶಿವರಾಜ್, ಗಾಯಿತ್ರಿ, ಚಿನ್ನಮ್ಮ, ನೀಲಮ್ಮ, ಆರ್. ಪಿ. ನಂಜುಂಡಸ್ವಾಮಿ, ಕಲೀಲ್, ಕಲಾವತಿ, ಆಶಾ, ಕುಮುದಾ, ಗೌರಿ, ಅಪ್ಸರ್ ಪಾಷಾ, ಮನೋಜ್ ಪಾಟೀಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ಎಸ್. ವಿ .ರಾಮದಾಸ್ , ಸದಸ್ಯರು, ನಗರಸಭಾ ಸಿಬ್ಬಂದಿ ಇದ್ದರು.

ಪ್ರತಿ ವಾರ್ಡಿಗೂ ಭೇಟಿ ಪರಿಶೀಲನೆ

ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುರೇಶ್ ಕಾರ್ಮಿಕರ ಕೊರತೆ ಮತ್ತು ಕಸವಿಲೇವಾರಿ ವಾಹನಗಳು ಕಡಿಮೆ ಇದ್ದು, ಈಗ ೨೧ ವಾಹನಗಳು ಇದ್ದು ಅವುಗಳನ್ನು ಕೆಲವು ದುರಸ್ಥಿಯಲ್ಲಿ ಇವೆ, ಹೊಸದಾಗಿ ೫ ವಾಹನಗಳು ಬರಲಿದ್ದು ದುರಸ್ಥಿಯಲ್ಲಿರುವ ವಾಹನಗಳನ್ನು ದುರಸ್ಥಿಪಡಿಸಿ ಮುಂದೆ ಎಲ್ಲಾ ವಾರ್ಡ್ಳಲ್ಲೂ ಸಮರ್ಪಕವಾಗಿ ಕಸವಿಲೇವಾರಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು