ಸಾರಾಂಶ
ಯಲಬುರ್ಗಾ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕಾಡಳಿತ ಹಾಗೂ ಪಂಚಮಸಾಲಿ ಸಮುದಾಯದಿಂದ ಹಮ್ಮಿಕೊಂಡಿದ್ದ ಚೆನ್ನಮ್ಮ ಜಯಂತಿ ನಿಮಿತ್ತ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಬ್ರಿಟಿಷರ ವಿರುದ್ಧ ಸಮರ ಸಾರಿದ ನಾಡಿನ ಮೊದಲ ಮಹಿಳೆ ರಾಣಿ ಚೆನ್ನಮ್ಮಳ ಧೈರ್ಯ ಶೌರ್ಯ ಮತ್ತು ದೇಶಪ್ರೇಮ ಮಹಿಳೆಯರಿಗೆ ಆದರ್ಶವಾಗಬೇಕು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಸಮರ್ಥವಾಗಿ ಹೋರಾಡಿ ಬ್ರಿಟಿಷರ ಎದೆ ನಡುಗಿಸಿದ ದಿಟ್ಟ ಮಹಿಳೆ ಚೆನ್ನಮ್ಮ. ಚೆನ್ನಮ್ಮನ ದಿಟ್ಟತನ, ಕೆಚ್ಚೆದೆಯ ಹೋರಾಟ ಹಾಗೂ ಅವರ ಕಾಲದ ಹೋರಾಟದ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು ಎಂದರು.
ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ರಾಣಿ ಚೆನ್ನಮ್ಮ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಧೀರ ಮಹಿಳೆಯಾಗಿದ್ದಾಳೆ.ಅಂತಹ ಮಹನೀಯರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಕೆ.ಜಿ. ಪಲ್ಲೇದ, ವೀರಣ್ಣ ಹುಬ್ಬಳ್ಳಿ, ಸಿದ್ರಾಮೇಶ ಬೇಲೇರಿ, ಬಸವರಾಜ ಗುಳಗುಳಿ, ಮಂಜುನಾಥ ಅಧಿಕಾರಿ, ಸಂಗಪ್ಪ ಕೊಪ್ಪಳ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಬಸವರಾಜ ಬಿಜಕಲ್, ಸಂಗಪ್ಪ ಹಳ್ಳಿ, ಶಿವನಗೌಡ ದಾನರಡ್ಡಿ, ನಿಂಗಪ್ಪ ಕಮತರ, ಅಪ್ಪಣ್ಣ ಬನ್ನಿಮರದ, ಗುರುಲಿಂಗನಗೌಡ, ಮುಖ್ಯಾಧಿಕಾರಿ ನಾಗೇಶ ಅಧಿಕಾರಿಗಳಾದ ಬೆಟದೇಶ ಮಾಳೆಕೊಪ್ಪ, ನಿಂಗನಗೌಡ ಪಾಟೀಲ್, ಅಶೋಕ ಗೌಡರ, ಎಸ್.ವಿ. ಧರಣಾ, ಸಿದ್ದಲಿಂಗಪ್ಪ ಶ್ಯಾಗೋಟಿ, ಫಕೀರಪ್ಪ ಕಟ್ಟಿಮನಿ ಸೇರಿದಂತೆ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))