ಚಿಕ್ಕಮಗಳೂರು : ವೈದ್ಯರು ನೀಡಿದ ಓವರ್ ಡೋಸ್ ಇಂಜೆಕ್ಷನ್‌ನಿಂದ 7 ವರ್ಷದ ಬಾಲಕ‌ ಸಾವು

| Published : Sep 29 2024, 10:51 AM IST

Death

ಸಾರಾಂಶ

ವೈದ್ಯರು ನೀಡಿದ ಓವರ್ ಡೋಸ್ ಇಂಜೆಕ್ಷನ್‌ನಿಂದ 7 ವರ್ಷದ ಬಾಲಕ‌ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬೂದಿಯಲ್ಲಿ ನಡೆದಿದೆ. ಕೆಂಚಾಪುರ ಗ್ರಾಮದ ನಿವಾಸಿ ಸೋನೇಶ್‌ (7) ಮೃತ ಬಾಲಕ.

ಅಜ್ಜಂಪುರ: ವೈದ್ಯರು ನೀಡಿದ ಓವರ್ ಡೋಸ್ ಇಂಜೆಕ್ಷನ್‌ನಿಂದ 7 ವರ್ಷದ ಬಾಲಕ‌ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬೂದಿಯಲ್ಲಿ ನಡೆದಿದೆ. ಕೆಂಚಾಪುರ ಗ್ರಾಮದ ನಿವಾಸಿ ಸೋನೇಶ್‌ (7) ಮೃತ ಬಾಲಕ. 

ಕಳೆದ 4 ದಿನಗಳಿಂದ ತೀವ್ರ ಜ್ವರದಿಂದ ಬಳಸುತ್ತಿದ್ದ ಸೋನೇಶ್‌ಗೆ ಚಿಕಿತ್ಸೆ ಕೊಡಿಸಲು ಬುಕ್ಕಾಂಬೂದಿಯ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ, ಕರ್ತವ್ಯದಲ್ಲಿದ್ದ ಡಾ.ವರುಣ್‌ ಅವರು ಬಾಲಕನಿಗೆ ಇಂಜೆಕ್ಷನ್‌ ನೀಡಿದ್ದು, ಆ ಜಾಗದಲ್ಲಿ ಬೊಬ್ಬೆ ಹಾಗೂ ಕೀವು ಕಾಣಿಸಿಕೊಂಡಿದೆ.

 ಇದರಿಂದ ತೀವ್ರ ಅಸ್ವಸ್ಥಗೊಂಡ ಸೋನೇಶ್‌ನನ್ನು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಡಾ.ವರುಣ್‌ ನೀಡಿರುವ ಓವರ್‌ ಡೋಸ್‌ನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲಕನ ಪೋಷಕರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.