ವಿಶೇಷ ಚೇತನ ಮಕ್ಕಳಲ್ಲಿದೆ ವಿಶೇಷ ಪ್ರತಿಭೆ: ಶಾಸಕ ಸಿದ್ದು ಸವದಿ

| Published : Aug 04 2025, 01:15 AM IST

ವಿಶೇಷ ಚೇತನ ಮಕ್ಕಳಲ್ಲಿದೆ ವಿಶೇಷ ಪ್ರತಿಭೆ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾರೀರಿಕ ಅಡಚಣೆ ಮಾನಸಿಕ ಶಕ್ತಿ ಎದುರು ಶಿರಬಾಗುತ್ತದೆ ಎಂಬಂತೆ ವಿಕಲತೆ ಮೀರಿ ಅಸಾಧಾರಣ ಸಾಮರ್ಥ್ಯ ತೋರಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇಂತಹ ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಇಲಾಖೆಯ ಎಲ್ಲಾ ಸವಲತ್ತು ಪಡೆದು ಈ ಮಕ್ಕಳು ಕೂಡ ಮುಂದೊಂದು ದಿನ ಇತಿಹಾಸ ಸೃಷ್ಟಿಸಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಶಾರೀರಿಕ ಅಡಚಣೆ ಮಾನಸಿಕ ಶಕ್ತಿ ಎದುರು ಶಿರಬಾಗುತ್ತದೆ ಎಂಬಂತೆ ವಿಕಲತೆ ಮೀರಿ ಅಸಾಧಾರಣ ಸಾಮರ್ಥ್ಯ ತೋರಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇಂತಹ ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಇಲಾಖೆಯ ಎಲ್ಲಾ ಸವಲತ್ತು ಪಡೆದು ಈ ಮಕ್ಕಳು ಕೂಡ ಮುಂದೊಂದು ದಿನ ಇತಿಹಾಸ ಸೃಷ್ಟಿಸಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿಯ ಕೆಎಚ್‌ಡಿಸಿ ಕಾಲೋನಿಯ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಕೆ. ಎಂ. ಕೋಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ಅಧಿಕಾರಿಗಳಾದ ಸಿ. ಎಸ್. ಕಲ್ಯಾಣಿ, ಎನ್‌ಜಿಒ ಅಧ್ಯಕ್ಷರು ಬಸವರಾಜ ಹನಗಂಡಿ, ವಿಶೇಷ ಚೇತನ ಅಧ್ಯಕ್ಷ ವಿಜಯಕುಮಾರ ಹಲಕುರ್ಕಿ, ಎನ್‌ಜಿಓ ಬ್ಯಾಂಕಿನ ಅಧ್ಯಕ್ಷ ಬಿ. ಡಿ. ನೇಮಗೌಡ ಎನ್‌ಜಿಒ ರಾಜ್ಯ ಪರಿಷತ್ ಸದಸ್ಯ ಪ್ರಶಾಂತ ಹೊಸಮನಿ, ಶಿಕ್ಷಣ ಸಂಯೋಜಕರು ಬಿ. ಎಮ್. ಹಳೆಮನಿ, ಸಿಆರ್‌ಪಿ ಜಗದೀಶ ಕುಲ್ಲೋಳಿ, ಶಾಲೆಯ ಪ್ರಧಾನ ಗುರುಗಳಾದ ಸಿ.ಎಚ್. ಬುದ್ನಿ, ಬಿ.ಎ. ಕಾಂಬಳೆ, ಎಸ್.ಟಿ. ಪರ್ವತಿ, ರೇಖಾ ಅಂತಾಪುರ, ಶೈಲಾ ಮಿರ್ಜೆ, ಎಸ್.ಟಿ. ಪರೂತಿ ಉಪಸ್ಥಿತರಿದ್ದರು.