ಸಾರಾಂಶ
ರಬಕವಿ-ಬನಹಟ್ಟಿಯ ಸರ್ವೆ ನಂ.೭ರ ಗುಂಡಯ್ಯನಮಠದ ಬಳಿಯ ಅರಣ್ಯ ಇಲಾಖೆಗೆ ಸೇರಿದ ಜಾಗಯನ್ನು ಅತಿಕ್ರಮಣಗೊಳಿಸಿಕೊಂಡು ನಿರ್ಮಿಸಿದ್ದ ಅನಧಿಕೃತ ಶೆಡ್ಗಳನ್ನು ಗುರುವಾರ ಬೆಳಗಿನ ಜಾವ ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿಯ ಸರ್ವೆ ನಂ.೭ರ ಗುಂಡಯ್ಯನಮಠದ ಬಳಿಯ ಅರಣ್ಯ ಇಲಾಖೆಗೆ ಸೇರಿದ ಜಾಗಯನ್ನು ಅತಿಕ್ರಮಣಗೊಳಿಸಿಕೊಂಡು ನಿರ್ಮಿಸಿದ್ದ ಅನಧಿಕೃತ ಶೆಡ್ಗಳನ್ನು ಗುರುವಾರ ಬೆಳಗಿನ ಜಾವ ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಯಿತು.ಕಳೆದ ತಿಂಗಳು ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸುವಂತೆ ಅತಿಕ್ರಮಣಕಾರರಿಗೆ ಇಲಾಖೆ ನೋಟೀಸ್ ಜಾರಿಗೊಳಿಸಿತ್ತಾದರೂ ಅತಿಕ್ರಮಣಕಾರರು ಸ್ಪಂದಿಸದ ಹಿನ್ನೆಲೆಯಲ್ಲಿ ಗುರುವಾರ ಕಂದಾಯ, ಪೊಲೀಸ್, ನಗರಸಭೆ, ಭೂಮಾಪನ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ವಲಯ ಅರಣ್ಯಾಧಿಕಾರಿ ಪವನ ಕುರಿನಿಂಗ, ಎಸಿಎಫ್ ಅಮೃತ ಗುಂಡೋಸಿ, ಉಪವಲಯಾಧಿಕಾರಿ ಮಲ್ಲಿಕಾರ್ಜುನ ನಾವಿ, ರಬಕವಿ-ಬನಹಟ್ಟಿ ಪ್ರಭಾರ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಡಿಎಸ್ಪಿ ಶಾಂತವೀರ, ಸಿಪಿಐ ಸಂಜೀವ ಬಳಗಾರ, ಪಿಎಸ್‌ಐಗಳಾದ ಶಾಂತಾ ಹಳ್ಳಿ, ವಿಜಯ ಕಾಂಬಳೆ, ಅಪ್ಪು ಐಗಳಿ, ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.