ಸಾರಾಂಶ
ಹಳೆಬೀಡಿನ ಪ್ರವಾಸಿ ಮಂದಿರದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಬಗರ್‌ಹುಕುಂ ಸಾಗುವಳಿ ಸಮಿತಿಯ ಅಧ್ಯಕ್ಷರಾದ ಮತಿಘಟ್ಟ ನಾಗೇಗೌಡ (ನಾಗರಾಜು)ರವರಿಗೆ ಹಳೆಬೀಡಿನ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ಹಳೆಬೀಡು: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಬಗರ್‌ಹುಕುಂ ಸಾಗುವಳಿ ಸಮಿತಿಯ ಅಧ್ಯಕ್ಷರಾದ ಮತಿಘಟ್ಟ ನಾಗೇಗೌಡ (ನಾಗರಾಜು)ರವರಿಗೆ ಹಳೆಬೀಡಿನ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅಧ್ಯಕ್ಷ ನಾಗರಾಜ್, ನಾನು ರೈತ ಕುಟುಂಬದಿಂದ ಬಂದವನು ರೈತರ ಕಷ್ಟ ನೋವುಗಳು ನನಗೆ ಗೊತ್ತಿದೆ. ಈ ಸಮಿತಿಯಲ್ಲಿ ರೈತರ ಪರ ಹೋರಾಟ ನನ್ನ ಗುರಿಯಾಗಿದೆ. ಯಾವುದೇ ರೈತರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅದಕ್ಕೆ ಸರ್ಕಾರದಿಂದ ಆಗುವ ಅನುಕೂಲ ಮಾಡಿಕೊಡಲಾಗುವುದು. ಈ ಅಧ್ಯಕ್ಷ ಸ್ಥಾನಕ್ಕೆ ಸಹಕರಿಸಿದ ಬೇಲೂರು ವಿಧಾನಸಭಾ ಕ್ಷೇತ್ರ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಈ ವೇಳೆ ಕಾರ್ಯಕರ್ತರಾದ ಜಿಲ್ಲಾ ಪಂ.ಮಾಜಿ ಸದಸ್ಯ ಎಚ್,ಎಮ್.ಮಂಜಪ್ಪ, ಕೆ.ಎಂ.ವೀರಣ್ಣ, ಜೀಪ್ ಚಂದ್ರು ,ಯತೀಶ್, ಭೈರೇಶ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
ನವೋದಯಕ್ಕೆ ಸಂಸ್ಥಾಪಕ ಕುಟುಂಬ ನಾಮಪತ್ರಚನ್ನರಾಯಪಟ್ಟಣ: ನವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಗೆ ಸಂಸ್ಥಾಪಕರಾದ ಸಂಜೀವಶಟ್ಟಿ ಅಂಕಂ ಕುಟುಂಬದ ಆದಿಶೇಷಕುಮಾರ್, ನರಸಣ್ಣನ ಕುಟುಂಬದ ಪುರಸಭಾ ಸದಸ್ಯ ನವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಿಂಡಿಕೇಟ್ ಆಗಿ ನಾಮಪತ್ರ ಸಲ್ಲಿಸಿದ್ದಾರೆ.ಸಂಸ್ಥೆಯನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕುಟುಂಬದವರನ್ನು ಬೆಂಬಲ ನೀಡಬೇಕು ಎಂದು ಆದಿಶೇಷ ಕುಮಾರ್ ಮನವಿ ಮಾಡಿದ್ದಾರೆ. ನವೋದಯ ಶಿಕ್ಷಣ ಸಂಸ್ಥೆಗೆ ಭೂಮಿ ದಾನ ಮಾಡಿದ್ದು ಇದುವರೆಗೂ ನಮ್ಮ ಕುಟುಂಬದವರು ಸಂಸ್ಥೆಯ ಆಡಳಿತ ಮಂಡಳಿಗೆ ಆಸಕ್ತಿ ವಹಿಸಿರಲಿಲ್ಲ. ಇದೇ ಮೊದಲ ಬಾರಿಗೆ ನಾವು ಚುನಾವಣೆಗೆ ನಿಲ್ಲುತ್ತಿದ್ದೇವೆ. ದಯಮಾಡಿ ನನಗೆ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿದರು.