ಸಾರಾಂಶ
9ನೇ ತರಗತಿ ವಿದ್ಯಾರ್ಥಿನಿ ಇಂಚರ ಸಂವಿಧಾನದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕ ಜಿಯಾವುಲ್ಲಾ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಲೆ ಪ್ರಾಂಶುಪಾಲರಾದ ಶರ್ವಾಣಿ, ಸಂಯೋಜನಾಧಿಕಾರಿ ವಾಣಿ, ಸಹಶಿಕ್ಷಕರಾದ ಸಂಗೀತ, ಸುಜಾತ, ರಶ್ಮಿ, ನವೀನ್, ರಾಜು, ಗಿರೀಶ್ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 5ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಪ್ರಸಿದ್ಧವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ, ಬದುಕುವ ಹಕ್ಕು, ಸ್ವಾತಂತ್ರ್ಯ, ಸಂವಿಧಾನ ಮೂಲಕ ದೊರೆತಿದೆ. ಸರ್ಕಾರ ಪ್ರತಿಯೊಬ್ಬರಿಗೂ ಸಮಪಾಲು ಸಮಬಾಳು ನೀಡುವಲ್ಲಿ ಸಂವಿಧಾನದ ಪಾತ್ರ ಬಹುಮುಖ್ಯ ಎಂದು ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಕನ್ನಡ ಸಹಶಿಕ್ಷಕ ಗಿರೀಶ್ ಹೇಳಿದರು.ಪಟ್ಟಣದ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ಸೋಮವಾರ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ನಮ್ಮ ಉಸಿರು. ಸ್ವಾತಂತ್ರ್ಯ ಸಮಾನತೆಯ ತತ್ವದಡಿಯಲ್ಲಿ ಪ್ರಜಾಪ್ರಭುತ್ವಕ್ಕೆ ಸುಭದ್ರ ಹಾಗೂ ಸ್ಪಷ್ಟವಾದ ಸಂವಿಧಾನವನ್ನು 1950, ಜನವರಿ 26ರಂದು ಜಾರಿಗೊಳಿಸಲಾಯಿತು. ಆ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಇದರ ಮೂಲಕರ್ತೃ ಅಂಬೇಡ್ಕರ್. ಆದ್ದರಿಂದ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ ಎಂದು ವಿವರಿಸಿದರು.
9ನೇ ತರಗತಿ ವಿದ್ಯಾರ್ಥಿನಿ ಇಂಚರ ಸಂವಿಧಾನದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕ ಜಿಯಾವುಲ್ಲಾ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಲೆ ಪ್ರಾಂಶುಪಾಲರಾದ ಶರ್ವಾಣಿ, ಸಂಯೋಜನಾಧಿಕಾರಿ ವಾಣಿ, ಸಹಶಿಕ್ಷಕರಾದ ಸಂಗೀತ, ಸುಜಾತ, ರಶ್ಮಿ, ನವೀನ್, ರಾಜು, ಗಿರೀಶ್ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 5ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.- - -
-27ಕೆ.ಎಸ್.ಕೆ.ಪಿ1:ಶಿಕಾರಿಪುರ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ಸೋಮವಾರ ಸಂವಿಧಾನ ದಿನ ಕಾರ್ಯಕ್ರಮ ನಡೆಯಿತು.