ಸಾರಾಂಶ
ದಾಬಸ್‌ಪೇಟೆ: ಭಾರತದ ಸಂವಿಧಾನ ವಿಶ್ವ ಶ್ರೇಷ್ಠವಾದುದು. ಅದರ ಪ್ರಕಾರ ನಡೆಯುವುದು ಅದಕ್ಕೆ ಗೌರವ ಕೊಡುವುದು ಭಾರತೀಯರೆಲ್ಲರ ಕರ್ತವ್ಯ ಎಂದು ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ.ಪ್ರಭುದೇವ್ ತಿಳಿಸಿದರು.
ದಾಬಸ್‌ಪೇಟೆ: ಭಾರತದ ಸಂವಿಧಾನ ವಿಶ್ವ ಶ್ರೇಷ್ಠವಾದುದು. ಅದರ ಪ್ರಕಾರ ನಡೆಯುವುದು ಅದಕ್ಕೆ ಗೌರವ ಕೊಡುವುದು ಭಾರತೀಯರೆಲ್ಲರ ಕರ್ತವ್ಯ ಎಂದು ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ.ಪ್ರಭುದೇವ್ ತಿಳಿಸಿದರು.
ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿವಗಂಗೆಯ ಬಸವಣ್ಣ ವೃತ್ತದವರೆಗೆ ಸಂವಿಧಾನ ರಥದ ಮೂಲಕ ಪೂರ್ಣಕುಂಭ ಹೊತ್ತು ಮಹಿಳೆಯರು ಜಾಥಾ ನಡೆಸಿದರು. ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಾಣಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ಗ್ರಾಪಂ ಉಪಾಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ದಿನೇಶ್ ನಾಯಕ್, ಮನುಪ್ರಸಾದ್, ಸಂತೋಷ್, ರಮೇಶ್, ಗಾಯತ್ರಮ್ಮ, ಪ್ರೇಮಲತಾ, ಚೇತನಾ, ಶ್ರೀನಿವಾಸ್, ಉಮಾದೇವಿ, ಗಂಗಾಧರಯ್ಯ, ಉಷಾ, ಕೌಸರ್ ಖಾನಂ, ಪಿಡಿಒ ಗಿರೀಶ್ ಇತರರು ಪಾಲ್ಗೊಂಡಿದ್ದರು.ಪೋಟೋ 1 : ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮಕ್ಕೆ ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ.ಪ್ರಭುದೇವ್ ಚಾಲನೆ ನೀಡಿದರು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಾಣಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಪುಷ್ಪಾ ಇತರರಿದ್ದರು.