ಕಾಂಗ್ರೆಸ್ಸಿನವರಿಂದ ಅಘೋಷಿತ ತುರ್ತುಸ್ಥಿತಿ ನಿರ್ಮಾಣ: ಸದಾನಂದ ಭಟ್ಟ

| Published : Dec 22 2024, 01:35 AM IST

ಕಾಂಗ್ರೆಸ್ಸಿನವರಿಂದ ಅಘೋಷಿತ ತುರ್ತುಸ್ಥಿತಿ ನಿರ್ಮಾಣ: ಸದಾನಂದ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಯಲ್ಲಿ ಅನಗತ್ಯವಾಗಿ ಸಿ.ಟಿ. ರವಿ ಅವರ ವಿರುದ್ಧ ಆರೋಪಿಸಲಾಗಿದೆ ಸದಾನಂದ ಭಟ್ಟ ನಿಡಗೋಡ ಆರೋಪಿಸಿದ್ದಾರೆ.

ಶಿರಸಿ: ದೆಹಲಿಯ ಸಂಸತ್ ಭವನದಲ್ಲಿ ಆರಂಭವಾಗಿರುವ ರಾಜಕೀಯ ವಿದ್ಯಮಾನ ತುರ್ತು ಪರಿಸ್ಥಿತಿ ರೂಪವನ್ನು ಮರುಕಳಿಸುತ್ತಿದ್ದು, ಬಿಜೆಪಿಯು ಖಂಡಿಸುತ್ತದೆ. ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ಸಿನವರಿಂದ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಯಲ್ಲಿ ಅನಗತ್ಯವಾಗಿ ಸಿ.ಟಿ. ರವಿ ಅವರ ವಿರುದ್ಧ ಆರೋಪಿಸಲಾಗಿದೆ. ರವಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿ, ಅಕ್ರಮವಾಗಿ ಒಳ ಪ್ರವೇಶಿಸಿ, ಸದನದಲ್ಲಿ ಬಂಧಿಸಿ, ಕಾಂಗ್ರೆಸ್ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸ್ಪೀಕರ್ ಅನುಮತಿ ಇಲ್ಲದೇ ಪೊಲೀಸರು ಅಕ್ರಮ ಪ್ರವೇಶ ಮಾಡಿ, ಬಂಧಿಸಿ, ಎಫ್‌ಐಆರ್ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ವಕ್ತಾರ ಸದಾನಂದ ಭಟ್ಟ ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಅವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಕಾಶಿ ಕಾರಿಡಾರ್ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶವಿತ್ತು. ಆದರೆ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದ ಅತ್ಯಂತ ದೊಡ್ಡ ಯೋಜನೆ ಕೈತಪ್ಪಿದೆ. ಮುಂದಿನ ದಿನಗಳಲ್ಲಾದರೂ ಈ ಯೋಜನೆಯನ್ನು ಸೇರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣದ ರವಿ ಶೆಟ್ಟಿ, ಸಹಕಾರಿ ಪ್ರಕೋಷ್ಠದ ಆರ್.ವಿ. ಹೆಗಡೆ ಚಿಪಗಿ ಮತ್ತಿತರರು ಇದ್ದರು.ಬೆಳೆ ವಿಮಾ

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಬೆಳೆ ವಿಮಾ ಹಣ ಇನ್ನೂ ಜಮಾ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದರ ಬಗ್ಗೆ ನೋಡಲು ಪುರುಸೊತ್ತಿಲ್ಲ ಎಂಬಂತೆ ಕಾಣುತ್ತದೆ. ಜಿಲ್ಲೆಗೆ ಸುಮಾರು ೧೦೦ ಕೋಟಿ ನೀಡಬೇಕಿದೆ. ಬಾರದಿದ್ದರೆ ಕಾನೂನು ಹೋರಾಟವನ್ನು ಬಿಜೆಪಿ ಮಾಡಲಿದೆ.

-ಸದಾನಂದ ಭಟ್ಟ ನಿಡಗೋಡ, ಬಿಜೆಪಿ ಜಿಲ್ಲಾ ವಕ್ತಾರ