ಜಾತಿ ಪದ್ಧತಿ ಮುಂದುವರಿಕೆ ಬಸವಣ್ಣನಿಗೆ ಮಾಡುತ್ತಿರುವ ಅವಮಾನ: ತೀರ್ಥಕುಮಾರಿ ವೆಂಕಟೇಶ್

| Published : Feb 18 2024, 01:32 AM IST

ಜಾತಿ ಪದ್ಧತಿ ಮುಂದುವರಿಕೆ ಬಸವಣ್ಣನಿಗೆ ಮಾಡುತ್ತಿರುವ ಅವಮಾನ: ತೀರ್ಥಕುಮಾರಿ ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಪದ್ಧತಿ ನಿರ್ಮೂಲನೆಗಾಗಿ ಎಲ್ಲಾ ಜಾತಿ ಸಮುದಾಯನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮನೋಭಾವನೆ ಮೂಡಿಸಿದ ಬಸವಣ್ಣನವರ ಆದರ್ಶಗಳನ್ನು ಪಾಲಿಸದೇ ಜಾತಿ ಪದ್ಧತಿಯನ್ನು ಮುಂದುವೆರೆಸಿಕೊಂಡು ಬರುತ್ತಿರುವುದು ವಿಷಾದನೀಯ ಎಂದು ಪುರಸಭೆ ಅಧಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು ಜಾತಿ ಪದ್ಧತಿ ನಿರ್ಮೂಲನೆಗಾಗಿ ಎಲ್ಲಾ ಜಾತಿ ಸಮುದಾಯನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮನೋಭಾವನೆ ಮೂಡಿಸಿದ ಬಸವಣ್ಣನವರ ಆದರ್ಶಗಳನ್ನು ಪಾಲಿಸದೇ ಜಾತಿ ಪದ್ಧತಿಯನ್ನು ಮುಂದುವೆರೆಸಿಕೊಂಡು ಬರುತ್ತಿರುವುದು ವಿಷಾದನೀಯ ಎಂದು ಪುರಸಭೆ ಅಧಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಪುರಸಭೆ ಆವರಣದಲ್ಲಿ ಶನಿವಾರ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಶ್ವ ಗುರು ಸಾಂಸ್ಕೃತಿಕ ರಾಯಬಾರಿ ಶ್ರೀ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಮಾತನಾಡಿದರು. ಬಸವಣ್ಣನವರು ಮಾಡಿದ ಕಾರ್ಯ ಶ್ಲಾಘನೀಯ. ಸಮಾಜದ ಅಂಕುಡೊಂಕುಗಳನ್ನು, ಜಾತಿ ಮತ ಇನ್ನೂ ಮುಂತಾದವುಗಳ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣಕ್ಕೆ ಬುನಾದಿಯಾದವರು, ಜಾತಿ ಪದ್ಧತಿ ನಿರ್ಮೂಲಗಾಗಿ ಅಂತರ ಜಾತಿ ವಿವಾಹ ಮಾಡಿಸಿ ದೇಶಕ್ಕೆ ಮಾದರಿಯಾದವರು. ಆದರೆ ಇಂದಿಗೂ ದೇಶದಲ್ಲಿ ಜಾತಿ ಪದ್ಧತಿ ನಡೆಯುತ್ತಿದ್ದು ಕೆಳವರ್ಗದರವನ್ನು ತುಳಿಯುತ್ತಿರುವುದು ವಿಷಾದನೀಯ ಎಂದರು. ತಹಸೀಲ್ದಾರ್‌ ಮಮತಾ ಎಂ ಮಾತನಾಡಿ, 12 ನೆ ಶತಮಾನದಲ್ಲಿ ಕ್ರಾಂತಿಯೋಗಿ ಎಂದೇ ಹೆಸರು ಪಡೆದ ಬಸವಣ್ಣನವರ ಆಶಯಗಳನ್ನು ಸರ್ಕಾರ ಜಾರಿಗೆ ತರುವ ನಿಟ್ಟಿನಲ್ಲಿ ಅವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅನಾವರಣ ಮಾಡಬೇಕೆಂದು ಆದೇಶ ಮಾಡಿದೆ. ಸರ್ವಕಾಲಿಕ ತತ್ವ ಕಾಲಿಕ ಮೌಲ್ಯಗಳನ್ನು ಎಲ್ಲರಿಗೂ ತಲುಪಬೇಕಂದು ಕ್ರಾಂತಿ ಮಾಡಿದ್ದರು. ಅವರ ಮೌಲ್ಯಗಳನ್ನು ಇಂದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲ್ಯಾಣ ರಾಜ್ಯ ಹೇಗಿರಬೇಕೆಂದು ಅಂದೇ ವಚನದಲ್ಲಿ ರಚಿಸಿದ್ದರು . ಅದು ಇಂದು ಸಂವಿಧಾನ ದಲ್ಲಿ ಕೆಲವೊಂದು ಅಳವಡಿಸಿಕೊಳ್ಳಲಾಗಿದೆ, ಮಹಿಳೆಯವರಿಗೆ ಸೂಕ್ತ ಸ್ಥಾನಮಾನ ದೊರಕಿಸಿ ಕೊಡಬೇಕು ಎಂಬ ಅರಿವನ್ನು ಮೂಡಿಸಿದ ಜ್ಞಾನಿ ಶ್ರೀ ಬಸವಣ್ಣನವರು ಎಂದರು. ಪ್ರದಾನ ಭಾಷಣಕಾರ ಲಿಂಗಾರಾಜು ಮಾತನಾಡಿ, ಬಸವಣ್ಣನವರ ವಚನ ಇಂದಿಗೂ ಬದುಕಿದೆ, 1169 ರಲ್ಲಿ ಜನಿಸಿದ ಇವರು 8ನೇ ವಯಸ್ಸಿನಲ್ಲಿ ಉಪನಯನವಾಯಿತು. ಅವರ ಕೃಪೆಯಿಂದ ಮಹಿಳೆಯರು ಇಂದು ಪುರುಷರಿಗೆ ಸಮಾನರಾಗಿ ಬದುಕುವ ದಾರಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಸಮಬಾಳ್ವೆ, ಜನ ಸಾಮಾನ್ಯರಂತೆ ಬದುಕಿದ ವ್ಯಕ್ತಿ ಬಸವಣ್ಣ ನುಡಿದಂತೆ ನಡೆಯುತ್ತಿದ್ದ ಅವರು ದೇಶದ ಕೇಂದ್ರಬಿಂದು ಎಂದರೆ ತಪ್ಪಲ್ಲ ಎಂದು ಹೇಳಿದರು. ಈ ವೇಳೆ ಪುರಸಭೆ ಉಪಾಧ್ಯಕ್ಷೆ ದೀವ್ಯಾ ಗಿರೀಶ್, ಅಕ್ರಮ್ ಷರೀಫ್, ಮೀನಾಕ್ಷಿ, ಬಿಇಒ ನಾರಾಯಣ್, ತಾಲೂಕು ವೈದ್ಯಾಧಿಕಾರಿ ಡಾ ವಿಜಯ್, ಬಲ್ಲೇನಹಳ್ಳಿ ರವಿ, ಸಮಾಜ ಕಲ್ಯಾಣ ಇಲಾಖೆ ರಮೇಶ್,ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವ ಮರಿಯಪ್ಪ, ತಾಲೂಕು ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಚೇತನ್, ಪುರಸಭೆ ಮುಖ್ಯಧಿಕಾರಿ ಸುಜಯ್, ಆರೋಗ್ಯಧಿಕಾರಿ ಲೋಹಿತ್, ಜ್ಯೋತಿ, ಕಂದಾಯಾಧಿಕಾರಿ ಹರೀಶ್ ಮತ್ತಿತರರಿದ್ದರು.