ಬಸವ ಪುರಾಣ ಕಲ್ಯಾಣೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

| Published : Apr 12 2025, 12:47 AM IST

ಬಸವ ಪುರಾಣ ಕಲ್ಯಾಣೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ಪುರಾಣದಲ್ಲಿ ಗೊಂಬೆಗಳ ಮದುವೆ ಮಾಡುವುದನ್ನು ನೀವು ಕೇಳಿರುತ್ತೀರಿ, ನೋಡಿದ್ದೀರಿ, ಇದಕ್ಕೆ ಅಪವಾದ ಎಂಬಂತೆ ಶಿರೋಳದ ತೋಂಟದಾರ್ಯ ಮಠದಲ್ಲಿ ಭಕ್ತರು ನೈಜ ವಧು-ವರರ ಮದುವೆಯನ್ನೇ ನೆರವೇರಿಸಿ ಕಲ್ಯಾಣಮಹೋತ್ಸವಕ್ಕೆ ನಿಜ ಅರ್ಥ ಕಲ್ಪಿಸಿದ್ದಾರೆ.

ನರಗುಂದ: ಬಸವ ಪುರಾಣದಲ್ಲಿ ಗೊಂಬೆಗಳ ಮದುವೆ ಮಾಡುವುದನ್ನು ನೀವು ಕೇಳಿರುತ್ತೀರಿ, ನೋಡಿದ್ದೀರಿ, ಇದಕ್ಕೆ ಅಪವಾದ ಎಂಬಂತೆ ಶಿರೋಳದ ತೋಂಟದಾರ್ಯ ಮಠದಲ್ಲಿ ಭಕ್ತರು ನೈಜ ವಧು-ವರರ ಮದುವೆಯನ್ನೇ ನೆರವೇರಿಸಿ ಕಲ್ಯಾಣಮಹೋತ್ಸವಕ್ಕೆ ನಿಜ ಅರ್ಥ ಕಲ್ಪಿಸಿದ್ದಾರೆ.

ಶಿರೋಳದಲ್ಲಿ ಈಗ ಬಸವ ಪುರಾಣ ಪ್ರವಚನ ನಡೆಯುತ್ತಿದ್ದು, 9ನೇ ದಿನಕ್ಕೆ ಕಲ್ಯಾಣ ಮಹೋತ್ಸವಕ್ಕೆ ವರ ಪ್ರಸನ್ನಕುಮಾರ ಲಮಾಣಿ ಜತೆ ದೇವಕ್ಕೆ ಚವ್ಹಾಣ ಅವರ ಮದುವೆ ನೆರವೇರಿಸಿದ್ದಾರೆ.

ಮೃತ್ಯುಂಜಯ ಹಿರೇಮಠ ಅವರ ವಚನೋತ್ಸವದೊಂದಿಗೆ ವರನಿಗೆ ರುದ್ರಾಕ್ಷಿ, ವಧುವಿಗೆ ಮಾಂಗಲ್ಯ ಧಾರಣ ಮಾಡಿಸಲಾಯಿತು.ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಅಪ್ಪಟ ಬಸವಾನುಯಾಯಿಗಳು ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳವರ ಬಸವ ತತ್ವಾಚರಣೆಯು ಶಿರೋಳ ಮಠದ ಬಸವ ಪುರಾಣದಲ್ಲಿ ನಿಜಾಚರಣೆ ಮಾಡಲಾಗುತ್ತಿದೆ ಎಂದರು.ಶಾಂತಲಿಂಗ ಮಹಾಸ್ವಾಮಿಗಳ ಸಮ್ಮುಖತ್ವದಲ್ಲಿ ವಧು-ವರರಿಗೆ ಸಂವಿಧಾನ ಪುಸ್ತಕ ನೀಡಿ ಸಾಮಾಜಿಕ ಬದ್ಧತೆಯ ಪೀಠಿಕೆ ಬೋಧಿಸಿದರು. ಮನುಷ್ಯನ ಜೀವನದಲ್ಲಿ ಮದುವೆಯೆಂಬುದು ಮಹತ್ತರ ಘಟನೆ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ-ಪುರುಷರೆಂಬ ಇಬ್ಬರನ್ನು ಸಾಮಾಜಿಕ–ಧಾರ್ಮಿಕ, ವಿಧಿ-ವಿಧಾನಗಳಿಂದ ಒಟ್ಟುಗೂಡಿಸುವ ಸಂಸ್ಕಾರವೇ ವಿವಾಹ, ಪರಸ್ಪರ ಪ್ರೀತಿ, ವಿಶ್ವಾಸ, ಆತ್ಮೀಯತೆಯಿಂದ ಇದ್ದಾಗ ಮಾತ್ರ ದಾಂಪತ್ಯ ಸುಂದರವಾಗುತ್ತದೆ. ನಾನು ನನ್ನದು ಎಂಬ ಅಹಂಕಾರವನ್ನು ಬಿಟ್ಟು, ನನ್ನವರು ಎಂಬ ವಲಯವನ್ನೆ ಬೃಹತ್ತಾಗಿ ವಿಸ್ತರಿಸಿಕೊಂಡ ಅಣ್ಣ ಬಸವಣ್ಣ, ಮಹಾತ್ಮ ಗಾಂಧೀಜಿ ಗೃಹಸ್ಥರಾಗಿದ್ದು, ವಿರಕ್ತರನ್ನು ಮೀರಿಸುವ ವಿಶ್ವ ಕುಟುಂಬಿಗಳಾಗಿ, ಆದರಣೀಯ ಮತ್ತು ಅನುಕರಣೀಯರಾಗಿದ್ದಾರೆ ಎಂದರು.ವೈಶಿಷ್ಟ್ಯ ಪೂರ್ಣವಾದ ಲಮಾಣಿ ಮತ್ತು ಚವ್ಹಾಣ ಮತ್ತು ರಾಠೋಡ ಬಂಧುಗಳ ಮದುವೆಯಲ್ಲಿ ತಮ್ಮ ಸಾಂಪ್ರಾದಾಯಿಕ ಉಡುಗೆಗಳನ್ನು ಧರಿಸಿದ್ದರು. ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ದಾನಿಗಳಾದ ವಿರೂಪಾಕ್ಷಪ್ಪ ಶೆಲ್ಲಿಕೇರಿ ದಂಪತಿಯನ್ನು ಮಠದಲ್ಲಿ ಸನ್ಮಾನಿಸಲಾಯಿತು. ಪುರಾಣ ಪ್ರವಚನಕಾರರಾದ ಶಶಿಧರ ಶಾಸ್ತ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ದಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಗುರುಬಸಯ್ಯ ನಾಗಲೋಟಿಮಠ, ಶಿವಾನಂದ ಯಲಿಬಳಿ, ಶ್ರೀಧರ ಶೀಪ್ರೀ, ಹನುಮಂತ ಕಾಡಪ್ಪನವರ, ಗುರುಬಸವ ಶೆಲ್ಲಿಕೇರಿ, ಲೋಕಪ್ಪ ಕರಕೀಕಟ್ಟಿ ಪರಶುರಾಮ ರಾಠೋಡ, ಮಾಹಾಬಳೇಶ್ವರಪ್ಪ ಕೋಡಬಳಿ, ಬಸಣ್ಣ ಕುಪ್ಪಸ್ತ, ಮುದಿವೀರಪ್ಪ ಕರಕೀಕಟ್ಟಿ, ವೀರಯ್ಯ ದೊಡಮನಿ, ಮುತ್ತಪ್ಪ ಕುರಿ, ಚಂದ್ರಕಾಂತ ಕಾಡದೇವರಮಠ, ದ್ಯಾಮಣ್ಣ ಶಾಂತಗೇರಿ, ರುಕ್ಮವ್ವ ಶಾಂತಗೇರಿ, ಶ್ರೀಕಾಂತ ದೊಡಮನಿ, ಶೇಖರಗೌಡ ಹೂಲಗೇರಿ, ಪ್ರಾಚಾರ್ಯರಾದ ಬಸವರಾಜ ಸಾಲಿಮಠ ಇದ್ದರು.