ಮದ್ದೂರಲ್ಲಿ ಕೊರೋನಾ ಪತ್ತೆ: ಜೆಎನ್‌-1 ಆತಂಕ

| Published : Dec 19 2023, 01:45 AM IST

ಸಾರಾಂಶ

ಕೇರಳದಲ್ಲಿ ಕೊರೋನಾ ರೂಪಾಂತರಿ(ಜೆಎನ್‌-1) ತಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾತ್ರ, ಮದ್ದೂರಲ್ಲಿ ಪತ್ತೆಯಾಗಿರುವ ಜೆಎನ್‌-1 ರೂಪಾಂತರಿಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

- ಜಿನೋಮ್‌ ಸ್ವೀಕ್ವೆನ್ಸ್‌ಗಾಗಿ ಸ್ಯಾಂಪಲ್‌ ರವಾನೆ- ಆತಂಕ ಬೇಡ, ವರದಿ ಇನ್ನೂ ಬಂದಿಲ್ಲ: ಡಿಎಚ್ಒಕನ್ನಡಪ್ರಭ ವಾರ್ತೆ ಮಂಡ್ಯಕೇರಳದಲ್ಲಿ ಕೊರೋನಾ ರೂಪಾಂತರಿ(ಜೆಎನ್‌-1) ತಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾತ್ರ, ಮದ್ದೂರಲ್ಲಿ ಪತ್ತೆಯಾಗಿರುವ ಜೆಎನ್‌-1 ರೂಪಾಂತರಿಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.ಈಗಾಗಲೇ ಕೋವಿಡ್‌ ಸ್ಯಾಂಪಲ್‌ ಅನ್ನು ಜಿನೋಮ್ ಸೀಕ್ವೆನ್‌ಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಆ ವರದಿ ಬಂದ ಬಳಿಕ ಮದ್ದೂರಲ್ಲಿ ಪತ್ತೆಯಾಗಿರುವುದು ನೆರೆಯ ಜೆಎನ್‌-1 ತಳಿಯೇ ಎಂಬುದು ದೃಢಪಡಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌ ಅವರು ಹೇಳಿದ್ದಾರೆ. ಊರಲ್ಲೇ ಇದ್ದ ವ್ಯಕ್ತಿ: ಸೋಂಕಿತ ಎಲ್ಲಿಗೂ ಪ್ರವಾಸ ಹೋಗಿರಲಿಲ್ಲ. ಸರ್ಜರಿಗೆಂದು ಆಸ್ಪತ್ರೆಗೆ ಬಂದ ಸಮಯದಲ್ಲಿ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ. ಆದರೆ, ವ್ಯಕ್ತಿಯಲ್ಲಿ ಸೋಂಕಿನ ಯಾವ ಲಕ್ಷಣಗಳೂ ಇಲ್ಲ. ಈತನೊಂದಿಗೆ ನಾಲ್ವರು ಸಂಪರ್ಕದಲ್ಲಿದ್ದವರನ್ನೂ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ಕಂಡುಬಂದಿಲ್ಲವೆಂದು ಡಾ.ಕೆ.ಮೋಹನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಕೊರೋನಾ ಹೊಸ ರೂಪಾಂತರಿ ಕೇರಳದ ಕೆಲವೆಡೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳಿಗೂ ಸೂಚಿಸಿದೆ. ಇದೀಗ ಮದ್ದೂರಿನಲ್ಲಿ ಕೊರೋನಾ ಕೇಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಆರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ವೆಂಟಿಲೇಟರ್‌ಗಳನ್ನು ಸಜ್ಜುಗೊಳಿಸಲಾಗಿದೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.