ಸಹಸ್ರಾರು ರೈತರಿಗೆ ಸೇರದ ಬೆಳೆ ಪರಿಹಾರ ಹಣ!

| Published : Mar 08 2024, 01:51 AM IST

ಸಾರಾಂಶ

ರಾಮನಗರ: ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ಖಾತೆಗೆ 2 ಸಾವಿರ ರು. ಬರ ಪರಿಹಾರವನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಜಿಲ್ಲೆಯ ಕೆಲ ರೈತರ ಕೈಗೆ ಇನ್ನೂ ಬೆಳೆ ಪರಿಹಾರದ ಹಣ ಸಿಕ್ಕಿಲ್ಲ.

ರಾಮನಗರ: ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ಖಾತೆಗೆ 2 ಸಾವಿರ ರು. ಬರ ಪರಿಹಾರವನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಜಿಲ್ಲೆಯ ಕೆಲ ರೈತರ ಕೈಗೆ ಇನ್ನೂ ಬೆಳೆ ಪರಿಹಾರದ ಹಣ ಸಿಕ್ಕಿಲ್ಲ.

ಬರ ಘೋಷಿತ 5 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರು.ಗಳವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ರಾಜ್ಯಸರ್ಕಾರ ಘೋಷಿಸಿತ್ತು. ಅಷ್ಟೇ ಅಲ್ಲದೆ ವಾರದ ಅಂತ್ಯದೊಳಗೆ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2 ಸಾವಿರ ಬರ ಪರಿಹಾರ ಬೀಳಲಿದೆ ಎಂದು ತಿಳಿಸಿತ್ತು. ಆದರೀಗ ಘೋಷಣೆ ಮಾಡಿ ತಿಂಗಳು ಕಳೆದರೂ ಪರಿಹಾರದ ಬಿಡಿಗಾಸು ಹಣ ಕೂಡ ಕೆಲ ರೈತರ ಖಾತೆಗೆ ಜಮಾ ಆಗಿಲ್ಲ. ಹೀಗಾಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 5 ತಾಲೂಕುಗಳನ್ನು ಬರಪರಿಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಅದರಂತೆ, ಜಿಲ್ಲೆಯ 42897 ಹೆಕ್ಟೇರ್ ವಿಸ್ತೀರ್ಣ ಮಳೆ ಅಭಾವದಿಂದ ಬಾಧಿತವಾಗಿದ್ದು, ಪರಿಹಾರ ವಿತರಣೆಗಾಗಿ ಜಿಲ್ಲಾಡಳಿತ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಅದರಂತೆ, ರಾಜ್ಯಸರ್ಕಾರ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ರೈತರಿಗೆ ಪರಿಹಾರ ವಿತರಿಸಲು ರಾಮನಗರ ಜಿಲ್ಲೆಗೆ ಎರಡು ಹಂತದಲ್ಲಿ 11.36 ಕೋಟಿ ರು. ಪರಿಹಾರ ಬಿಡುಗಡೆ ಮಾಡಿ 63,689 ರೈತರ ನೆರವಿಗೆ ಧಾವಿಸಿತ್ತು. ಆದರೀಗ ಇದರಲ್ಲಿ 4870 ಕೃಷಿಕರಿಗೆ ಕಾರಣಾಂತರಗಳಿಂದ ಪರಿಹಾರ ಮೊತ್ತವೇ ಸಿಕ್ಕಿಲ್ಲ. ಇದರಲ್ಲಿ ಚನ್ನಪಟ್ಟಣ-531, ರಾಮನಗರ 756, ಕನಕಪುರ-867, ಹಾರೋಹಳ್ಳಿ-548 ಮತ್ತು ಮಾಗಡಿ-2168 ಸೇರಿದಂತೆ ಒಟ್ಟು 4870 ರೈತರು ಸೇರಿದ್ದಾರೆ.

ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ರೈತರ ಆಧಾರ್ ನಂಬರ್ ಮಿಸ್ ಮ್ಯಾಚ್, ಇನ್‌ಆ್ಯಕ್ಟೀವ್, ಬ್ಲಾಕ್ಡ್, ಆಧಾರ್ ನಾಟ್ ಸೀಡೆಡ್, ಅಕೌಂಟ್ ಕ್ಲೋಸ್ಡ್ ಹಾಗೂ ಇತರೆ ಕಾರಣಗಳಿಂದಾಗಿ ಕೃಷಿಕರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾವಣೆ ಆಗಿಲ್ಲ.

ಆದ್ದರಿಂದ ಪರಿಹಾರ ಮೊತ್ತ ಈ ಕಾರಣಗಳಿಂದಾಗಿ ಜಮಾ ಆಗದೇ ಇರುವ ರೈತರು ಹೋಬಳಿ ಮಟ್ಟದ ಕೃಷಿ ಇಲಾಖೆ, ತೋಟಗಾರಿಕೆ/ರೇಷ್ಮೆ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಹಾರ ಮೊತ್ತ ಜಮಾ ಆಗದಿರುವ ಬಗ್ಗೆ ಕಾರಣಗಳನ್ನು ತಿಳಿದುಕೊಂಡು ತುರ್ತಾಗಿ ಇಲಾಖೆಗಳ ಸಹಯೋಗದೊಂದಿಗೆ ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಬರಪರಿಹಾರ ಮೊತ್ತ ಪಡೆದುಕೊಳ್ಳುವಂತೆ ಪ್ರಕಟಣೆ ಹೊರಡಿಸಿರುವುದಾಗಿ ಜಂಟಿ ಕೃಷಿ ನಿರ್ದೇಶಕರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಬಾಕ್ಸ್ .........

ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿರುವ ಸಂಬಂಧ ಸರ್ಕಾರದ ಸೂಚನೆಯಂತೆ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿತ್ತು.

ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 44,128 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಇದರಿಂದ ಅಂದಾಜು 274 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ಕ್ರೋಢೀಕೃತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

ಆನಂತರ ರಾಜ್ಯ ಸರ್ಕಾರವು ತಾಲೂಕುವಾರು ಬೆಳೆ ಹಾನಿಗೆ ಇನ್ ಪುಟ್ ಸಬ್ಸಿಡಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.

ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿ ಅನುಸಾರ ಶೇಕಡ 33ಗಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಅರ್ಹ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕಾಗಿದೆ. ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯಿಂದ ಅನುದಾನ ಬಿಡುಗಡೆ ಆಗಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ SDRF/NDRF ಮಾರ್ಗಸೂಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರದ ಎರಡು ಕಂತುಗಳಲ್ಲಿ ಅಥವಾ ಬೆಳೆ ಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ಅರ್ಹ ರೈತರಿಗೆ ಗರಿಷ್ಠ 2 ಸಾವಿರ ರು.ಗಳನ್ನು ಬೆಳೆ ಪರಿಹಾರ ಪಾವತಿಸಿದೆ.

ಬಾಕ್ಸ್ .............

ರಾಜ್ಯ ಸರ್ಕಾರದಿಂದ 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2,000 ರು.ಗಳವರೆಗೆ ರೈತರಿಗೆ ಪಾವತಿಸಲು ಸರ್ಕಾರವು ಅನುಮತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಿದೆ.

ಬಾಕ್ಸ್ ..............

ತಾಲೂಕುವಾರು ಪರಿಹಾರ ಮೊತ್ತ ವಿತರಣೆ ವಿವರ

ತಾಲೂಕ.

ಫಲಾನುಭವಿ ರೈತರ.

ಪರಿಹಾರ ಮೊತ್ತ (ರು.ಗಳಲ್ಲಿ)

ಮಾಗಡ.

28,56.

5,22,62,658

ರಾಮನಗ.

8,93.

1,52,25,648

ಚನ್ನಪಟ್ಟ.

5,67.

88,52,883

ಕನಕಪು.

13,08.

2,40,52,867

ಹಾರೋಹಳ್ಳ.

7,41.

1,32,40,228

ಒಟ್ಟ.

63,68.

11,36,34,284

7ಕೆಆರ್ ಎಂಎನ್ 2.ಜೆಪಿಜಿ

ಸಂಗ್ರಹ ಚಿತ್ರ.

--------------------------------