ಸಿಲಿಂಡರ್ ಸ್ಫೋಟ: ಗುಡಿಸಲು ಮನೆ ಬೆಂಕಿಗಾಹುತಿ

| Published : Dec 19 2023, 01:45 AM IST

ಸಾರಾಂಶ

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗುಡಿಸಲು ಮನೆ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಪಿವೈ ಹುಣಶ್ಯಾಳ ಗ್ರಾಮದ ಸರ್ಕಾರಿ ಹೈಸ್ಕೂಲ್ ಬಳಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಮೂಡಲಗಿ

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗುಡಿಸಲು ಮನೆ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಪಿವೈ ಹುಣಶ್ಯಾಳ ಗ್ರಾಮದ ಸರ್ಕಾರಿ ಹೈಸ್ಕೂಲ್ ಬಳಿ ನಡೆದಿದೆ. ಗಂಗಪ್ಪ ಕುರಬರ ಎಂಬವರಿಗೆ ಸೇರಿದ ಗುಡಿಸಲು ಮನೆ ಸಿಲಿಂಡರ್ ಸ್ಫೋಟದಿಂದ ಸಂಪೂರ್ಣ ಮನೆ ಸುಟ್ಟು ಹೋಗಿದೆ. ಸೋಮವಾರ ಬೆಳಗ್ಗೆ ಗಂಗಪ್ಪ ಹಾಗೂ ತನ್ನ ಪತ್ನಿ ಇಬ್ಬರು ಗದ್ದೆ ಕೆಲಸಕ್ಕೆ ಹೋಗಿದ್ದಾರೆ ಇತ್ತ, ಮಕ್ಕಳು ಕೂಡಾ ಶಾಲೆಗೆ ಹೋಗಿದ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಇದ್ದ ಸಿಲಿಂಡರ್ ಸ್ಫೋಟಗೊಂಡಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

ಅದೃಷ್ಟವಶಾತ್ ಮನೆಯ ಪಕ್ಕದಲ್ಲಿ ಇದ್ದ ಜಾನುವಾರುಗಳನ್ನು ಬೇರೆಡೆಗೆ ಕಟ್ಟಿದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾವೆ. ಇನ್ನೂ ತಮ್ಮ ಸಂಬಂಧಿಕರ ಜಾಗದಲ್ಲಿ ಗೆಯಲ್ಲಿ ಗುಡಿಸಲು ಮನೆ ಹಾಕಿಕೊಂಡು ಗಂಗಪ್ಪ ಕುರುಬರ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಇದೀಗ ಮನೆ ಸುಟ್ಟು ಹೋಗಿದ್ದು, ಮೊನ್ನೆತಾನೆ ಬಂದಿದ್ದ ಕಬ್ಬಿನ ಬಿಲ್ ಹಣ ₹2 ಲಕ್ಷ, ಬಂಗಾರ ವಸ್ತುಗಳು, ದಿನಬಳಕೆಯ ವಸ್ತುಗಳು, ರೈತಾಪಿ ಕೆಲಸಕ್ಕೆ ಬಳಸುವ ಸಲಕರಣೆಗಳೂ ಕೂಡ ಸುಟ್ಟು ಕರಕಲಾಗಿದ ಪರಿಣಾಮ ಆ ಕುಟುಂಬದವರ ಜೀವನ ನಿರ್ವಹಣೆಯೇ ಕಷ್ಟದಲ್ಲಿ ಸಿಲುಕುವಂತೆ ಆಗಿದೆ. ಮನೆ ಸುಟ್ಟು ಹೋಗಿರುವುದರಿಂದ ಮುಂದೇನು ಮಾಡಬೇಕೆಂದು ತಿಳಿಯದೇ ಕಟುಂಬಸ್ಥರು ಕಂಗಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಕುಲಗೋಡ ಪೊಲೀಸ್ ಠಾಣೆಯ ಪಿಎಸೈ ಗೋವಿಂದಗೌಡ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.