ಅಡಕೆ ಹಳದಿ ಎಲೆ ರೋಗ ಪತ್ತೆಗೆ ವಿಟ್ಲ ಸಿಪಿಸಿಆರ್‌ಐ ಲ್ಯಾಬ್ ಸಿದ್ಧ!ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ದಲ್ಲಿ ಸುಸಜ್ಜಿತ ಲ್ಯಾಬ್ ಸಿದ್ಧಗೊಂಡಿದೆ. ಕರ್ನಾಟಕ ಸರ್ಕಾರದ 50 ಲಕ್ಷ ರು. ಅನುದಾನದ ನೆರವಿನಲ್ಲಿ ಸಿಪಿಸಿಆರ್‌ಐ ಸಮುಚ್ಛಯದಲ್ಲಿ ಈ ಲ್ಯಾಬ್ ತೆರೆಯಲಾಗಿದ್ದು, ಶೀಘ್ರವೇ ಕಾರ್ಯಾರಂಭಿಸಲಿದೆ.