ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಳಿಸಲು ನಿರ್ಧಾರ

| Published : Nov 23 2024, 01:19 AM IST

ಸಾರಾಂಶ

ಕೋರ್ಟ್ ಸರ್ಕಲ್ ಬಳಿ ಹಳೆ ತಹಸೀಲ್ದಾರ ಕಚೇರಿ ಮುಂಭಾಗದ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಡಾ.ಅಂಬೇಡ್ಕರ್‌ ಅವರ ಕಂಚಿನ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಇಲ್ಲಿನ ಕೋರ್ಟ್ ಸರ್ಕಲ್ ಬಳಿ ಹಳೆ ತಹಸೀಲ್ದಾರ ಕಚೇರಿ ಮುಂಭಾಗದ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಡಾ.ಅಂಬೇಡ್ಕರ್‌ ಅವರ ಕಂಚಿನ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್‌ ಪ್ರತಿಮೆ ಅನಾವರಣ (ಉದ್ಘಾಟನೆ) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ತಾಲೂಕಿನ ದಲಿತ ಮುಖಂಡರು, ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ನಗರದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ವೇಳೆ ಹುಕ್ಕೇರಿಯಲ್ಲಿ ಸ್ಥಾಪಿಸಿದ ಅಂಬೇಡ್ಕರ್‌ ಪ್ರತಿಮೆ ಉದ್ಘಾಟಿಸಲು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಗೃಹ ಸಚಿವ ಜಿ. ಪರಮೇಶ್ವರ್‌, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ನಿಖಿಲ್ ಕತ್ತಿ ಹಾಗೂ ಬೌದ್ಧ ಬಿಕ್ಕುಗಳಾದ ಭಂತೇಜಿ, ಮೈಸೂರು ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಮತ್ತಿತರರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಯಿತು.

ಇದೇ ವೇಳೆ ಖ್ಯಾತ ಅಂಬೇಡ್ಕರ್ ವಿಚಾರವಾದಿಗಳಿಂದ ವಿಶೇಷ ಉಪನ್ಯಾಸ, ಬೈಕ್‌ ರ್‍ಯಾಲಿ, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸ್ವಾಗತ ಕೋರುವ ಕಮಾನ್ ಮತ್ತು ಬ್ಯಾನರ್‌ಗಳ ಅಳವಡಿಕೆ, ಪ್ರಮುಖ ಬೀದಿ ಮತ್ತು ವೃತ್ತಗಳಲ್ಲಿ ಅಂಬೇಡ್ಕರ್‌ ಜೀವನಾಧಾರಿತ ಗೋಡೆ ಬರಹ ಬರೆಯಿಸುವುದು, ವಿದ್ಯುತ್ ದೀಪಾಂಲಕಾರ ಸೇರಿದಂತೆ ಇಡೀ ಪಟ್ಟಣ ನೀಲಿಮಯದಂತೆ ಕಂಗೊಳಿಸಲು ಈಗಿನಿಂದಲೆ ಸಿದ್ಧತೆ ಕೈಗೊಳ್ಳಲು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.

ಸಚಿವರು, ಗಣ್ಯರು, ಬೌದ್ಧಬಿಕ್ಕುಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಜನರು ಅಂಬೇಡ್ಕರ್ ಪುತ್ಥಳಿ ಅನಾವರಣದಲ್ಲಿ ಭಾಗಿಯಾಗುವುದರಿಂದ ಕಾರ್ಯಕ್ರಮ ಯಶಸ್ವಿಗೆ ತಾಲೂಕಿನ ಎಲ್ಲ ದಲಿತ ಮುಖಂಡರು ಸಂಘಟಿತ ಪ್ರಯತ್ನ ಮತ್ತು ಪರಿಶ್ರಮ ವಹಿಸಬೇಕು. ಇದಕ್ಕಾಗಿ ಮುಖ್ಯ ಸಮಿತಿ ಮತ್ತು ಉಪಸಮಿತಿ ರಚಿಸಲು ನಿರ್ಧರಿಸಲಾಯಿತು.

ಮುಖಂಡರಾದ ಉದಯ ಹುಕ್ಕೇರಿ, ಶ್ರೀಕಾಂತ ತಳವಾರ, ಸುರೇಶ ತಳವಾರ, ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ಕೋಳಿ, ದಿಲೀಪ ಹೊಸಮನಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ರಮೇಶ ಹುಂಜಿ, ಬಸವರಾಜ ಖಡಕಬಾಂವಿ, ಸದಾಶಿವ ಕಾಂಬಳೆ, ಸುನೀಲ ಬೈರನ್ನವರ, ಲಕ್ಷ್ಮಣ ಹೂಲಿ, ದೀಪಕ ವೀರಮುಖ, ಅಪ್ಪಣ್ಣಾ ಖಾತೇದಾರ, ವಿಕ್ರಮ ಕರನಿಂಗ, ಪ್ರಕಾಶ ಮೈಲಾಖೆ, ರಾಜೇಂದ್ರ ಮೋಶಿ, ಶಿವಾನಂದ ಮರಿನಾಯಿಕ, ಮಹಾಂತೇಶ ತಳವಾರ, ಪ್ರಮೋದ ಕೂಗೆ, ಶಂಕರ ತಿಪ್ಪನಾಯಿಕ, ಮುತ್ತು ಕಾಂಬಳೆ, ರೋಹಿತ ತಳವಾರ, ಅಕ್ಷಯ ವೀರಮುಖ, ಮಾರುತಿ ತಳವಾರ, ಕರೆಪ್ಪಾ ಗುಡೆನ್ನವರ, ವಿಠ್ಠಲ ಮಾದರ, ಕಾಡೇಶ ಹೊಸಮನಿ, ರಾಜು ಮೂಥಾ, ರೇಖಾ ಬಂಗಾರಿ, ಶಾಂತಾ ಹೆಳವಿ, ಸತೀಶ ದಿನ್ನಿಮನಿ, ಬಸವರಾಜ ತಳವಾರ, ಲಗಮಣ್ಣಾ ಕಣಗಲಿ, ಶಿವು ಮಾಳಗೆ, ಪ್ರದೀಪ ಕಾಮಾನೆ, ಚಿದಾನಂದ ಹಿರೇಕೆಂಚನವರ, ನಾಗೇಶ ವಾಳವಿ, ಪ್ರದೀಪ ರಿಜಕನವರ, ರಮೇಶ ತಳವಾರ, ರವಿ ಕಾಂಬಳೆ, ತೇಜು ದೊಡ್ಡಮನಿ, ವಿನೋದ ಮಾಳಗೆ, ಚಂದು ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.

ಫೋಟೊ ಶೀರ್ಷಿಕೆ : 21ಎಚ್‌ಯುಕೆ-1