ನ್ಯಾಷನಲ್ ಅಪ್ನಿ ಪಾರ್ಟಿ ಘೋಷಣೆ

| Published : Aug 25 2024, 01:45 AM IST

ಸಾರಾಂಶ

ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳ ನಾಯಕರೆಲ್ಲ ಕೋಟಿ ಕೋಟಿ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಇಡೀ ರಾಜ್ಯವನ್ನೇ ಲೂಟಿ ಹೊಡೆದಿದ್ದರಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಪಕ್ಷಗಳಿಗೆ ತಕ್ಕ ಉತ್ತರ ಕೊಡಲು ಹೊಸದಾಗಿ ನ್ಯಾಷನಲ್ ಅಪ್ನಿ ಪಾರ್ಟಿ ಘೋಷಿಸಲಾಗಿದೆ ಎಂದು ನ್ಯಾಷನಲ್ ಅಪ್ನಿ ಪಾರ್ಟಿ ರಾಜ್ಯಾಧ್ಯಕ್ಷ ಫಿರೋಜ್ ಶೇಖ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಈಗಷ್ಟೇ ಪಕ್ಷವನ್ನು ಜನರ ಎದುರಿಗೆ ತಂದಿದ್ದು, ಶೀಘ್ರ ರಾಜ್ಯ ಸಮಿತಿ ಸಭೆ ಕರೆದು, 30 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರು ಹಾಗೂ ಎಲ್ಲ ತಾಲೂಕುಗಳಿಗೆ ತಾಲೂಕು ಅಧ್ಯಕ್ಷ, ಕಾರ್ಯದರ್ಶಿಗಳನ್ನು ನೇಮಿಸಿಕೊಂಡು ಅಖಾಡಕ್ಕೆ ಇಳಿಯಲಿದ್ದೇವೆ. ಈ ಪಕ್ಷದ ಮೂಲಕ ನಾವು 2028ರ ವೇಳೆಗೆ ಪ್ರಬುದ್ಧ ಕರ್ನಾಟಕದ ಮುಂದೆ ಬಂದು 224 ಕ್ಷೇತ್ರಳಲ್ಲಿಯೂ ನಾವು ಪದಾರ್ಪಣೆ ಮಾಡಲಿದ್ದೇವೆ ಎಂದರು.ಸಧ್ಯದಲ್ಲೇ ಬರಲಿರುವ ಚನ್ನಪಟ್ಟಣ, ಬಳ್ಳಾರಿ, ಶಿಗ್ಗಾವಿಯ ಉಪ ಚುನಾವಣೆಗಳಿಂದಲೇ ಅಖಾಡಕ್ಕಿಯುವುದು ಮತ್ತು ಮುಂಬರುವ ತಾಲೂಕು ಪಂಚಾಯತಿ, ಜಿಪಂ ಚುನಾವಣೆಗಳ ಮೂಲಕ ಪ್ರಾಮಾಣಿಕ ಪಕ್ಷದಿಂದ ಚುನಾವಣಾ ರಣಕಹಳೆ ಊದಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿಕಾಗೌಡ, ರಾಜ್ಯ ಕಾರ್ಯದರ್ಶಿ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಗುರುನಾಥರೆಡ್ಡಿ ಉಪಸ್ಥಿತರಿದ್ದರು.