ಸಾರಾಂಶ
ರಾಮನಗರ: ಭಾನುವಾರ ನವರಾತ್ರಿಯ ಸಪ್ತಮಿ ದಿನ ರಾಮನಗರದಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ವೆಂಕಟಲಕ್ಷ್ಮಿ ಅಲಂಕಾರ ನೆರೆವೇರಿಸಲಾಗಿತ್ತು.
ರಾಮನಗರ: ಭಾನುವಾರ ನವರಾತ್ರಿಯ ಸಪ್ತಮಿ ದಿನ ರಾಮನಗರದಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ವೆಂಕಟಲಕ್ಷ್ಮಿ ಅಲಂಕಾರ ನೆರೆವೇರಿಸಲಾಗಿತ್ತು.
ಅಮ್ಮನವರ ಉತ್ಸವ ಮೂರ್ತಿಗೆ ಮಾಹೇಶ್ವರಿ ಅಲಂಕಾರ ನೆರೆವೇರಿಸಲಾಗಿತ್ತು. ದೇವಾಲಯದಲ್ಲಿರುವ ಇತರ ದೇವತಾ ಮೂರ್ತಿಗಳಿಗೆ ಬಗೆಬಗೆಯ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಪ್ರಥಮ ದಿನ ಕೊಲ್ಲಾಪುರ ಮಹಾಲಕ್ಷ್ಮಿ ಅಲಂಕಾರ, ದ್ವಿತೀಯ ದಿನ ಕರಗ ಅಲಂಕಾರ, ತೃತೀಯ ದಿನ ಸಂತಾನ ಲಕ್ಷ್ಮಿ, ಚತುರ್ಥಿ ದಿನ ಗಾಯತ್ರಿ ದೇವಿ, ಪಂಚಮಿದಿನ ವಾರಾಹಿ, ಷಷ್ಠಿ ದಿನ ಹೂವಿನ ಅಲಂಕಾರ ನೆರೆವೇರಿಸಲಾಗಿತ್ತು.ಸಪ್ತಮಿ ದಿನ ಭಾನುವಾರ ವೇಂಕಟಲಕ್ಷ್ಮಿ ಅಲಂಕಾರ ನೆರೆವೇರಿಸಲಾಗಿತ್ತು. ಸಂಗೀತ, ಶಿಲ್ಪಕಲೆ, ಚಿತ್ರಕಲೆ ಮತ್ತು ದೇವತಾ ಮೂರ್ತಿಗಳಿಗೆ ಅಲಂಕಾರ ನಿಪುಣರಾದ ಅನಂತಸತ್ಯ ಮತ್ತು ರಾಧಾಕೃಷ್ಣ ಸಹೋದರರು ಭಾನುವಾರ ವಿಶೇಷ ಅಲಂಕಾರ ನೆರೆವೇರಿಸಿದರು. ವೇಂಕಟಲಕ್ಷ್ಮಿ ಅಲಂಕಾರದ ಬಗ್ಗೆ ಮಾತನಾಡಿದ ಸಹೋದರರು, ಕನ್ನಿಕಾಪರಮೇಶ್ವರಿ ಅಮ್ಮನವರು ಶಕ್ತಿಯ ಸ್ವರೂಪ. ಆದರೆ ಭಕ್ತರು ಶ್ರೀಮಾತೆಯನ್ನು ವೆಂಕಟೇಶ್ವರ ಸ್ವಾಮಿಯ ರೂಪದಲ್ಲಿ ಕಾಣಲು ಕಾತುರರಾಗಿದ್ದರು. ಹೀಗಾಗಿ ತಾವು ವೇಂಕಟಲಕ್ಷ್ಮಿ ಅಮ್ಮನವರ ನೆರೆವೇರಿಸಿದ್ದಾಗಿ ತಿಳಿಸಿದರು.
ಶ್ರೀವಿಷ್ಣುವಿನ ಗರುಡವಾಹನ, ಲಕ್ಷ್ಮಿ ದೇವಿಯ ತಾವರೆ ಹೂವನ್ನು ಅಲಂಕಾರದಲ್ಲಿ ತೋರಿಸಲಾಗಿದೆ. ಶ್ರೀನಿವಾಸನಿರುವ ಹಾರವನ್ನು ತೊಡಿಸಲಾಗಿದೆ ಎಂದು ತಾವು ನೆರೆವೇರಿಸಿರುವ ಅಲಂಕಾರದ ಮಹತ್ವವನ್ನು ತಿಳಿಸಿದರು. ಶ್ರೀಮಾತೆ ಕನ್ನಿಕಾಪರಮೇಶ್ವರಿ ಅಮ್ಮನವರನ್ನು ದರ್ಶಿಸಿದ ಭಕ್ತರು ತಿರುಪತಿಯ ಶ್ರೀ ವೆಂಕಟೇಶ್ವರ, ಶ್ರೀ ಲಕ್ಷ್ಮಿ ದೇವಿಯವರನ್ನು ಕಂಡಷ್ಟೇ ತೃಪ್ತಿಯಾಗಿದೆ ಎಂದು ಭಕ್ತರು ಪ್ರತಿಕ್ರಿಯಿಸಿದರು.